ಸಿರಿಯ ವಿರುದ್ಧ ದಾಳಿ ನಡೆಸದಂತೆ ಅಮೆರಿಕಕ್ಕೆ ರಶ್ಯ ಎಚ್ಚರಿಕೆ

Update: 2018-08-30 14:53 GMT

ಮಾಸ್ಕೋ, ಆ. 30: ಅಮೆರಿಕವು ಸಿರಿಯದ ಮೇಲೆ ಹೊಸದಾಗಿ ದಾಳಿಗಳನ್ನು ನಡೆಸಬಹುದು ಎಂಬ ಸೂಚನೆಗಳಿಂದ ರಶ್ಯ ಕಳವಳಗೊಂಡಿದೆ ಎಂಬುದನ್ನು ಈ ವಾರ ಅಮೆರಿಕದ ಅಧಿಕಾರಿಗಳಿಗೆ ತಾನು ತಿಳಿಸಿರುವುದಾಗಿ ಅಮೆರಿಕಕ್ಕೆ ರಶ್ಯದ ರಾಯಭಾರಿ ಅನಾತೊಲಿ ಆ್ಯಂಟೊನೊವ್ ಹೇಳಿದ್ದಾರೆ.

ಸಿರಿಯದ ಮೇಲೆ ‘ಅಕಾರಣ ಹಾಗೂ ಕಾನೂನುಬಾಹಿರ’ ದಾಳಿ ನಡೆಸುವುದರ ವಿರುದ್ಧ ಈ ಸಂದರ್ಭದಲ್ಲಿ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ರಶ್ಯ ರಾಯಭಾರಿ ಈ ವಾರ ಸಿರಿಯಕ್ಕೆ ವಿಶೇಷ ರಾಯಭಾರಿ ಜೇಮ್ಸ್ ಜೆಫ್ರಿ ಸೇರಿದಂತೆ ಅಮೆರಿಕದ ಅಧಿಕಾರಿಗಳನ್ನು ಭೇಟಿಯಾದರು ಎಂದು ರಶ್ಯ ರಾಯಭಾರ ಕಚೇರಿ ಫೇಸ್‌ಬುಕ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News