ಹೌದಿ ಕಮಾಂಡರ್‌ಗಳ ಸಭೆಯ ಮೇಲೆ ದಾಳಿ; ಹಲವು ಸಾವು

Update: 2018-08-30 14:57 GMT

ಹುದೈದಾ (ಯಮನ್), ಆ. 30: ಯಮನ್‌ನ ಬಂದರು ನಗರ ಹುದೈದಾದ ಬೈಟ್ ಅಲ್ ಫಾಕಿಹ್‌ನಲ್ಲಿ ನಡೆಯುತ್ತಿದ್ದ ಹೌದಿ ಬಂಡುಕೋರರ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ನಡೆಸಿದ ದಾಳಿಯಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ.

ಇರಾನ್ ಬೆಂಬಲಿತ ಹೌದಿ ಬಂಡುಕೋರರು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ಖಚಿತ ಗುಪ್ತಚರ ಮಾಹಿತಿಯನ್ನು ಪಡೆದ ಬಳಿಕ ಮಿತ್ರಕೂಟ ಈ ದಾಳಿ ನಡೆಸಿದೆ ಎಂದು ‘ಅರಬ್ ನ್ಯೂಸ್’ ವರದಿ ಮಾಡಿದೆ.

ಹೌದಿ ಹೋರಾಟಗಾರರು ವಿವಿಧ ಯುದ್ಧಭೂಮಿಗಳಿಂದ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಪಲಾಯನಗೈದಿದ್ದಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News