ಭಾರತ, ಚೀನಾ ನಡುವೆ ಹಾಟ್‌ಲೈನ್ ಸ್ಥಾಪಿಸಲು ಸಂಧಾನ: ಚೀನಾ

Update: 2018-08-30 17:09 GMT

ಬೀಜಿಂಗ್, ಆ. 30: ವಿಶ್ವಾಸವೃದ್ಧಿ ಕ್ರಮಗಳ ಭಾಗವಾಗಿ 12 ವರ್ಷಗಳ ಹಿಂದಿನ ರಕ್ಷಣಾ ಒಪ್ಪಂದವೊಂದನ್ನು ಮೇಲ್ದರ್ಜೆಗೇರಿಸುವ ಹಾಗೂ ಉಭಯ ದೇಶಗಳ ರಕ್ಷಣಾ ಸಚಿವಾಲಯಗಳ ನಡುವೆ ಹಾಟ್‌ಲೈನ್ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾಗಳು ಮಾತುಕತೆ ನಡೆಸುತ್ತಿವೆ ಎಂದು ಚೀನಾ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಕಳೆದ ವಾರ ಚೀನಾ ರಕ್ಷಣಾ ಸಚಿವ ಜನರಲ್ ವೀ ಫೆಂಘೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಿದ್ದರು.

ಈ ಭೇಟಿಯ ಸಂದರ್ಭದಲ್ಲಿ, ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಏರ್ಪಟ್ಟಿದ್ದ ಮಹತ್ವದ ಒಮ್ಮತವನ್ನು ಹೇಗೆ ಮತ್ತಷ್ಟು ವಿಸ್ತರಿಸಬಹುದು ಎಂಬ ಬಗ್ಗೆ ಉಭಯ ತಂಡಗಳು ವಿವರವಾದ ಮಾತುಕತೆ ನಡೆಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News