ಸ್ಕ್ವಾಷ್: ಹಾಂಕಾಂಗ್ ವಿರುದ್ಧ ಸೋತ ಭಾರತ
Update: 2018-08-30 23:59 IST
ಜಕಾರ್ತ, ಆ.30: ಭಾರತ ಮಹಿಳಾ ಸ್ಕ್ವಾಷ್ ತಂಡ ಏಶ್ಯನ್ ಗೇಮ್ಸ್‌ನ ಟೀಮ್ ಇವೆಂಟ್‌ನ ‘ಬಿ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 1-2 ಅಂತರದಿಂದ ಸೋಲುಂಡಿದೆ.
ಸ್ಟಾರ್ ಆಟಗಾರ್ತಿಯರಾದ ದೀಪಿಕಾ ಪಲ್ಲಿಕಲ್ ಹಾಗೂ ಜೋಶ್ನಾ ಚಿನ್ನಪ್ಪ ಸಿಂಗಲ್ಸ್ ಪಂದ್ಯಗಳಲ್ಲಿ ಸೋತಿದ್ದಾರೆ. ಉದಯೋನ್ಮುಖ ಆಟಗಾರ್ತಿ ಸುನಯನಾ ಕುರುವಿಲ್ಲಾ ಭಾರತ ಪರ ಏಕೈಕ ಅಂಕ ಗಳಿಸಿದರು. ಇನ್ನೋರ್ವ ಯುವ ಆಟಗಾರ್ತಿ ತನ್ವಿ ಖನ್ನಾ ಪಂದ್ಯದಲ್ಲಿ ಆಡಲಿಲ್ಲ.
ನಾಲ್ವರು ಸದಸ್ಯೆಯರನ್ನು ಒಳಗೊಂಡ ಭಾರತದ ಮಹಿಳಾ ಸ್ಕ್ವಾಷ್ ತಂಡ ಈಗಾಗಲೇ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಮಲೇಶ್ಯಾವನ್ನು ಎದುರಿಸಲಿದೆ.