ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನಿಯರಿಗಾಗಿ ಜೋರ್ಡಾನ್‌ನಿಂದ ನಿಧಿ ಸಂಗ್ರಹ

Update: 2018-08-31 14:52 GMT

ಅಮ್ಮಾನ್ (ಜೋರ್ಡಾನ್), ಆ. 31: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಪುನರ್ವಸತಿ ಸಂಸ್ಥೆಯನ್ನು ಜೀವಂತವಾಗಿಡುವುದಕ್ಕಾಗಿ ಮುಂದಿನ ವಾರ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೋರ್ಡಾನ್ ನಿಧಿ ಸಂಗ್ರಹ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

 ಕಾರ್ಯಕ್ರಮವು ಸೆಪ್ಟಂಬರ್ 27ರಂದು ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ನಡೆಯಲಿದೆ ಎಂದದು ಜೋರ್ಡಾನ್ ವಿದೇಶ ಸಚಿವ ಐಮನ್ ಸಫಾದಿ ತಿಳಿಸಿದರು.

ಕಾರ್ಯಕ್ರಮದ ಉದ್ದೇಶ ವಿಶ್ವಸಂಸ್ಥೆಯ ಫೆಲೆಸೀನ್ ನಿರಾಶ್ರಿತರ ಪುನರ್ವಸತಿ ಸಂಸ್ಥೆಗೆ ನಿಧಿ ಸಂಗ್ರಹಿಸುವುದಾಗಿದೆ ಎಂದರು. ಸಂಸ್ಥೆಗೆ ನೀಡುವ ವಾರ್ಷಿಕ ಅನುದಾನದಿಂದ 300 ಮಿಲಿಯ ಡಾಲರ್ (ಸುಮಾರು 2,100 ಕೋಟಿ ರೂಪಾಯಿ) ಮೊತ್ತವನ್ನು ಅಮೆರಿಕ ಈ ವರ್ಷದ ಜನವರಿಯಲ್ಲಿ ಕಡಿತಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಹಾಗಾಗಿ, ಸಂಸ್ಥೆಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News