ಜಾಗತಿಕ ತಾಪಮಾನದಿಂದ ಕೃಷಿಗೆ ಅಪಾಯ: ಅಧ್ಯಯನ

Update: 2018-08-31 15:31 GMT

ಟಾಂಪ (ಅಮೆರಿಕ), ಆ. 31: ಜಾಗತಿಕ ತಾಪಮಾನವು ಭೂಮಿಗೆ ಮಾರಕ ಎನ್ನುವುದಕ್ಕೆ ವಿಜ್ಞಾನಿಗಳು ಇನ್ನೂ ಒಂದು ಕಾರಣವನ್ನು ಪತ್ತೆಹಚ್ಚಿದ್ದಾರೆ.

ಹೆಚ್ಚುತ್ತಿರುವ ತಾಪಮಾನವು ಕೀಟಗಳ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಕೆಲವು ಕೀಟಗಳ ವಂಶಾಭಿವೃದ್ಧಿಯನ್ನು ತ್ವರಿತಗೊಳಿಸುತ್ತದೆ. ಇದು ಕೋಟ್ಯಂತರ ಜನರ ಮೂಲಾಧಾರವಾಗಿರುವ ಗೋಧಿ, ಜೋಳ ಮತ್ತು ಅಕ್ಕಿ ಮುಂತಾದ ಪ್ರಮುಖ ಧಾನ್ಯಗಳಿಗೆ ಅಪಾಯ ತಂದೊಡ್ಡುತ್ತದೆ ಸಂಶೋಧಕರು ಗುರುವಾರ ಹೇಳಿದ್ದಾರೆ.

ಜಗತ್ತಿನಾದ್ಯಂತ ಜನರು ತಿನ್ನುತ್ತಿರುವ ಕ್ಯಾಲರಿಯ 42 ಶೇಕಡದಷ್ಟನ್ನು ಈ ಮೂರು ಬೆಳೆಗಳು ಒದಗಿಸುತ್ತಿರುವುದರಿಂದ, ಈ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯವಾದರೆ ಜಗತ್ತಿನಲ್ಲಿ, ಅದರಲ್ಲೂ ಮುಖ್ಯವಾಗಿ ಬಡ ದೇಶಗಳಲ್ಲಿ ಆಹಾರ ಅಭದ್ರತೆ ಮತ್ತು ಸಂಘರ್ಷ ಕಾಣಿಸಿಕೊಳ್ಳುತ್ತದೆ ಎಂದು ವರ್ಮಂಟ್ ವಿಶ್ವವಿದ್ಯಾನಿಲಯದ ಸಂಶೋಧಕ ಹಾಗೂ ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಸಹ ಲೇಖಕ ಸ್ಕಾಟ್ ಮೆರಿಲ್ ಹೇಳುತ್ತಾರೆ.

‘‘ತಾಪಮಾನ ಏರುವಾಗ ಕೀಟಗಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಜೀರ್ಣಶಕ್ತಿ ಹೆಚ್ಚಿದಾಗ ಕೀಟಗಳು ಹೆಚ್ಚು ಆಹಾರವನ್ನು ತಿನ್ನುತ್ತವೆ, ಇದು ಬೆಳೆಗಳಿಗೆ ಒಳ್ಳೆಯದಲ್ಲ’’ ಎಂದು ಅಧ್ಯಯನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News