75 ಮಕ್ಕಳನ್ನು ಸೇನೆಯಿಂದ ಬಿಡುಗಡೆಗೊಳಿಸಿದ ಮ್ಯಾನ್ಮಾರ್

Update: 2018-08-31 15:32 GMT

ಯಾಂಗನ್ (ಮ್ಯಾನ್ಮಾರ್), ಆ. 31: ಮ್ಯಾನ್ಮಾರ್ ಸಶಸ್ತ್ರ ಪಡೆ ಶುಕ್ರವಾರ 75 ಮಕ್ಕಳು ಮತ್ತು ಅಪ್ರಾಪ್ತ ವಯಸ್ಕರನ್ನು ಸೇನಾ ಸೇವೆಯಿಂದ ಬಿಡುಗಡೆಗೊಳಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್ ಸೇನೆಯು 2012 ಜೂನ್‌ನಲ್ಲಿ ಬಾಲ ಸೈನಿಕರಿಗೆ ಸಂಬಂಧಿಸಿದ ಜಂಟಿ ಕ್ರಿಯಾ ಯೋಜನೆಯೊಂದಕ್ಕೆ ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿದ ಬಳಿಕ, ಈವರೆಗೆ 924 ಅಪ್ರಾಪ್ತ ವಯಸ್ಕರನ್ನು ಸೇನೆಯಿಂದ ಬಿಡುಗಡೆಗೊಳಿಸಿದೆ ಎಂದು ಮ್ಯಾನ್ಮಾರ್‌ನಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಮಾನವೀಯ ಸಮನ್ವಯಕಾರ ಕ್ನಟ್ ಓಸ್ಟ್‌ಬಿ ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್‌ನ ಪ್ರತಿನಿಧಿ ಜೂನ್ ಕುನುಗಿ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಾಲ ಸೈನಿಕರನ್ನು ಬಳಸುತ್ತಿರುವುದಕ್ಕಾಗಿ ಮ್ಯಾನ್ಮಾರ್ ಸೇನೆ ಮತ್ತು ಅದು ದಶಕಗಳಿಂದ ಹೋರಾಟ ನಡೆಸುತ್ತಿರುವ ಬುಡಕಟ್ಟು ಗೆರಿಲ್ಲಾ ಗುಂಪುಗಳನ್ನು ವಿಶ್ವಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News