ಆಲಪ್ಪುಳ ಪರಿಹಾರ ಕೇಂದ್ರದಲ್ಲಿ ಅಚ್ಚರಿಗೆ ಕಾರಣವಾದ ಟೂತ್ ಬ್ರಶ್ !

Update: 2018-08-31 15:49 GMT

ಆಲಪ್ಪುಳ, ಆ.31: ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಕೇರಳದಲ್ಲಿ ನಿರಾಶ್ರಿತ ಶಿಬಿರಗಳಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಕೆಲವರು ತಮಗೆ ಬೇಡದ ಎಲ್ಲಾ ವಸ್ತುಗಳನ್ನು ನಿರಾಶ್ರಿತ ಶಿಬಿರಗಳಿಗೆ ಕಳುಹಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ 1988ರಲ್ಲಿ ತಯಾರಾಗಿದೆ ಎನ್ನಲಾದ ಟೂತ್ ಬ್ರಶ್ ಒಂದು ನಿರಾಶ್ರಿತ ಶಿಬಿರವೊಂದರಲ್ಲಿ ಸಿಕ್ಕಿದೆ ಎಂದು ವರದಿಯಾಗಿದೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಲಪ್ಪುಳದಲ್ಲಿರುವ ಸೈಂಟ್ ಫ್ರಾನ್ಸಿಸ್ ಹೈಯರ್ ಸೆಕೆಂಡರಿ ಸ್ಕೂಲನ್ನು ನಿರಾಶ್ರಿತ ಕೇಂದ್ರವನ್ನಾಗಿ ಬದಲಿಸಲಾಗಿದೆ. ಇಲ್ಲಿ ನೂರಾರು ಮಂದಿ ಆಶ್ರಯ ಪಡೆದಿದ್ದಾರೆ. ಇಲ್ಲಿಗೆ ಪರಿಹಾರ ಸಾಮಗ್ರಿಗಳ ಜೊತೆ ಬಂದಿದ್ದ ಟೂತ್ ಬ್ರಷ್ ಒಂದನ್ನು ಸ್ವಯಂ ಸೇವಕರೊಬ್ಬರು ಗಮನಿಸಿದ್ದರು ಎನ್ನಲಾಗಿದೆ. ಅದರಲ್ಲಿ ಬ್ರಷ್ ತಯಾರಿಕಾ ದಿನಾಂಕ 1988 ಎಂದಿದ್ದು, ಬೆಲೆ 2.50 ರೂ. ಎಂದಿದೆ. ಈ ಬ್ರಷ್ ನ ವಿಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

19888 ಬ್ರಷ್ ಎಂದು ಕೆಲವರು ಹುಬ್ಬೇರಿಸಿದ್ದರೆ,  ಹಳೆಯ ವಸ್ತುಗಳನ್ನು ನಿರಾಶ್ರಿತ ಕೇಂದ್ರಕ್ಕೆ ತಲುಪಿಸಿ ಕೈತೊಳೆದುಕೊಳ್ಳುವುದು ತಪ್ಪು ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News