ಏಕರೂಪ ನಾಗರಿಕ ಸಂಹಿತೆ ಅನಗತ್ಯ: ಕೇಂದ್ರಕ್ಕೆ ತಿಳಿಸಿದ ಕಾನೂನು ಆಯೋಗ

Update: 2018-08-31 17:16 GMT

ಹೊಸದಿಲ್ಲಿ,ಆ.31: ಭಾರತದಲ್ಲಿಯ ಎಲ್ಲ ಸಮುದಾಯಗಳಿಗೆ ಸಮಾನ ನಾಗರಿಕ ಕಾನೂನು ಈ ಹಂತದಲ್ಲಿ ಅನಗತ್ಯ ಮಾತ್ರವಲ್ಲ,ಅನಪೇಕ್ಷಣೀಯವೂ ಆಗಿದೆ ಎಂಬ ನಿರ್ಧಾರಕ್ಕೆ ಬಂದಿರುವ ಕಾನೂನು ಆಯೋಗವು,ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಇದು ಸಕಾಲವಾಗಿದೆ ಎಂಬ ಸಲಹೆಯನ್ನು ತಿರಸ್ಕರಿಸಿದೆ. ತನ್ನ ಮೂರು ವರ್ಷಗಳ ಅಧಿಕಾರಾವಧಿಯ ಅಂತ್ಯಕ್ಕೆ ಕೆಲವೇ ಗಂಟೆಗಳ ಮೊದಲು ಶುಕ್ರವಾರ ಬಿಡುಗಡೆಗೊಳಿಸಿದ ತನ್ನ ಸಮಾಲೋಚನಾ ಪತ್ರದಲ್ಲಿ ಆಯೋಗವು ಇದನ್ನು ಸ್ಪಷ್ಟಪಡಿಸಿದೆ.

ವಿವಿಧ ಸಮುದಾಯಗಳ ವೈಯಕ್ತಿಕ ಕಾನೂನುಗಳ ಕುರಿತಂತೆ ಏಕರೂಪ ಸಂಹಿತೆಯನ್ನು ತರಲು ಕಾಲ ಪಕ್ವವಾಗಿದೆಯೇ ಎನ್ನುವುದನ್ನು ತಿಳಿಸುವಂತೆ ಕೇಂದ್ರವು ಎರಡು ವರ್ಷಗಳಿಗೂ ಹಿಂದೆ ಆಯೋಗಕ್ಕೆ ಸೂಚಿಸಿತ್ತು.

ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಎಸ್ ಚೌಹಾಣ್ ನೇತೃತ್ವದ ಆಯೋಗವು,ಪುರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯವನ್ನುಂಟು ಮಾಡುತ್ತಿರುವ ಕಾನೂನುಗಳತ್ತ ಗಮನ ಹರಿಸುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News