ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವು ನೀಡಲು ಅಷ್ಟಮಿ ವೇಷ

Update: 2018-09-01 12:59 GMT

ಉಡುಪಿ, ಸೆ.1: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂಡುಬೆಟ್ಟು ಮಧ್ವನಗರದ 'ನಮ್ಮ ಜವಣೆರ್' ತಂಡ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ವೇಷ ತೊಟ್ಟು ರಂಜಿಸಲಿದ್ದಾರೆ.

ಮಧ್ವನಗರದ 30 ಯುವಕರ ತಂಡ ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಕಳೆದ ಎರಡು ವಷಗಳಿಂದ ಆಕರ್ಷಕವಾದ ವಿಶೇಷ ವೇಷಗಳನ್ನು ತೊಟ್ಟು ಸಾರ್ವ ಜನಿಕವಾಗಿ ಸಂಗ್ರಹಿಸಿದ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತಿದೆ. ಈ ಬಾರಿಯು ಈ ತಂಡದ ಸಂತೋಷ್ ಮತ್ತು ಅಬ್ಬು ಎಂಬ ವರು ವೇಷ ತೊಡಲಿದ್ದು, ಉಳಿದವರು ಸಹಕಾರ ನೀಡಲಿದ್ದಾರೆ.

2016ರಲ್ಲಿ ಸಂಗ್ರಹವಾದ 48 ಸಾವಿರ ರೂ.ನಲ್ಲಿ 4 ಮಂದಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವು ಒದಗಿಸಲಾಗಿದೆ. 2017ರಲ್ಲಿ ಸಂಗ್ರಹವಾದ 2 ಲಕ್ಷ ರೂ. ಹಣದಲ್ಲಿ ಹೃದಯ ಖಾಯಿಲೆಯಿಂದ ಬಳಲುತಿದ್ದ ಆಯುಷ್ ಬನ್ನಂಜೆ, ಕುಂಭಾಶಿಯ ಬಡ ಮಹಿಳೆ ಶಕುಂತಲ ಪೂಜಾರಿ ಎಂಬವರ ಮನೆ ರಿಪೇರಿಗೆ, ಅಂಬಲಪಾಡಿಯ ಅನಾರೋಗ್ಯ ಬಾಲಕಿ ದಿತಿಗೆ ನೆರವು ನೀಡಲಾಗಿತ್ತು.

ಈ ಭಾರಿ ಅಷ್ಟಮಿಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ವಿಶೇಷ ಮಕ್ಕಳಿಗೆ ನೆರವು ನೀಡಲು ತಂಡ ನಿರ್ಧರಿಸಿದೆ. ವೈದ್ಯರೊಬ್ಬರ ಸಲಹೆ ಮೇರೆಗೆ ಮಂಚಿಯ ಬಡತನ ಕುಟುಂಬದ ವಿಶೇಷ ಮಕ್ಕಳಾದ ನೌಷದ್ ಮತ್ತು ರಿಯಾಝ್ ಎಂಬವರ ಔಷಧಿ ಖರ್ಚಿಗೆ ನೆರವು ನೀಡಲು ತಂಡ ಮುಂದಾಗಿದೆ. ಕ್ಯಾನ್ಸರ್ ಕಾಯಿಲೆ ಯಿಂದ ಬಳಲುತ್ತಿರುವ ಬಡ ಕುಟುಂಬದ ಬಾಲಕ ಮಲ್ಪೆ ಕದಿಕೆಯ ಜೀವನ್ (4) ಎಂಬಾತನ ಚಿಕಿತ್ಸೆಗೆ ನೆರವು ನೀಡಲು ತಂಡ ನಿರ್ಧರಿಸಿದೆ.

ಕಳೆದ ಅಷ್ಟಮಿಯಲ್ಲಿ ವಿಶೇಷ ಮಾದರಿಯಲ್ಲಿ ಅಲಂಕರಿಸಿದ ಬೈಕ್ ಮೇಲೆ ಇಬ್ಬರ ಮೇಲೆ ಏಲಿಯನ್ ಸಂಚರಿಸುವ ತಂಡದ ವೇಷವು ಸಾಕಷ್ಟು ಗಮನ ಸೆಳೆದಿತ್ತು. ಈ ಬಾರಿಯೂ ಅದೇ ರೀತಿಯ ವಿಶಿಷ್ಟ ವೇಷವನ್ನು ತೊಟ್ಟು ಮನರಂಜನೆ ನೀಡಲು ತಂಡ ಸಿದ್ಧತೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News