ಸೆಪ್ಟಂಬರ್ ಐದರಂದು ಮಹಿಳಾ ನ್ಯಾಯಾಧೀಶರನ್ನೇ ಹೊಂದಿರುವ ಪೀಠದಿಂದ ವಿಚಾರಣೆ

Update: 2018-09-01 16:02 GMT

ಹೊಸದಿಲ್ಲಿ, ಸೆ.1: ಸೆಪ್ಟಂಬರ್ ಐದರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಆರ್.ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಸೇರಿದಂತೆ ಮಹಿಳಾ ನ್ಯಾಯಮೂರ್ತಿಗಳನ್ನೇ ಹೊಂದಿರುವ ಪೀಠವು ವಿಚಾರಣೆ ನಡೆಸಲಿದೆ.

 2013ರಲ್ಲಿ ನ್ಯಾಯಾಧೀಶೆ ಗ್ಯಾನ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್ ದೇಸಾಯಿ ಜೊತೆಯಾಗಿ ಪ್ರಕರಣವೊಂದರ ವಿಚಾರಣೆ ನಡೆಸುವ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಟ್ಟಮೊದಲ ಬಾರಿ ಮಹಿಳಾ ನ್ಯಾಯಾಧೀಶರನ್ನೇ ಹೊಂದಿರುವ ಪೀಠಕ್ಕೆ ಸಾಕ್ಷಿಯಾಗಿದ್ದರು.

ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಮೂವರು ಮಹಿಳಾ ನ್ಯಾಯಾಧೀಶರ ಪೈಕಿ ಬಾನುಮತಿ ಅತ್ಯಂತ ಹಿರಿಯರಾಗಿದ್ದು 2014ರ ಆಗಸ್ಟ್ 13ರಂದು ಸುಪ್ರೀಂ ಕೋರ್ಟ್‌ಗೆ ಭಡ್ತಿ ಪಡೆದಿದ್ದರು.

ನ್ಯಾಯಾಧೀಶೆ ಫಾತಿಮಾ ಬೀವಿ ಶ್ರೇಷ್ಠ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಮೊಟ್ಟಮೊದಲ ಮಹಿಳಾ ನ್ಯಾಯಾಧೀಶೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News