ನಿಯಮಗಳ ಅನುಷ್ಠಾನ ಕಾನೂನಿನ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ: ಸಿಜೆಐ

Update: 2018-09-01 16:06 GMT

ಹೊಸದಿಲ್ಲಿ, ಸೆ.1: ಒಂದು ದೇಶದಲ್ಲಿ ಕಾನೂನಿನ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು ಆ ದೇಶದಲ್ಲಿ ನೀಡಲಾಗುವ ಕಾನೂನಿನ ಕುರಿತ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 10ನೇ ಕಾನೂನು ಶಿಕ್ಷಕರ ದಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ಶಾಲೆಗಳು, ಕಾನೂನಿನ ನಿಯಮಗಳ ಅನುಷ್ಠಾನದ ಕಾರ್ಯದ ಮೇಲೆ ನಿಗಾಯಿಡುವ ಕಾನೂನು ವೃತ್ತಿಪರರನ್ನು ಪೂರೈಸುವ ಉತ್ಪಾದನಾ ಕೇಂದ್ರಗಳಂತೆ ಎಂದು ಅಭಿಪ್ರಾಯಿಸಿದ್ದಾರೆ. ಕಾನೂನು ಶಿಕ್ಷಣ ಒಂದು ವಿಜ್ಞಾನವಾಗಿದ್ದು ಕಾನೂನು ವಿದ್ಯಾರ್ಥಿಗಳಲ್ಲಿ ಪ್ರಬುದ್ಧತೆಯ ಭಾವ ಮತ್ತು ಸಮಾಜದ ಬಗ್ಗೆ ತಿಳುವಳಿಕೆಯನ್ನು ಉಂಟುಮಾಡುತ್ತದೆ. ಜೊತೆಗೆ ನಾಗರಿಕ ಸ್ವಾತಂತ್ರಗಳ ರಕ್ಷಕರಾಗಿ ಅವರನ್ನು ರೂಪುಗೊಳಿಸುತ್ತದೆ ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ. ಇದೇ ವೇಳೆ ಅವರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ದೇಶದಲ್ಲಿ ಕಾನೂನು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಈ ವಿಶ್ವವಿದ್ಯಾನಿಲಯಗಳು ಅತ್ಯಂತ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News