×
Ad

ಹಾಲಿವುಡ್ ನಟಿಯನ್ನು ಗುಂಡಿಟ್ಟು ಕೊಂದ ಪೊಲೀಸರು

Update: 2018-09-01 22:01 IST

ವಾಶಿಂಗ್ಟನ್, ಸೆ. 1: ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಪೊಲೀಸರು ಶುಕ್ರವಾರ ಹಾಲಿವುಡ್ ನಟಿಯೊಬ್ಬರನ್ನು ಗುಂಡಿಟ್ಟು ಕೊಂದಿದ್ದಾರೆ.

ನಟಿಯನ್ನು 49 ವರ್ಷದ ವನೀಸಾ ಮಾರ್ಕೀಝ್ ಎಂಬುದಾಗಿ ಗುರುತಿಸಲಾಗಿದೆ. ಅವರು ಟಿವಿ ಧಾರಾವಾಹಿ ‘ಇಆರ್’ ಮತ್ತು ‘ಸ್ಟಾಂಡ್ ಆ್ಯಂಡ್ ಡೆಲಿವರ್’ ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದರು.

ನಟಿಯು ತಮ್ಮತ್ತ ಆಟಿಕೆ ಬಂದೂಕನ್ನು ಗುರಿಯಿಟ್ಟ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡು ಹಾರಿಸಲಾಯಿತು ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ತನ್ನನ್ನು ಹಾಲಿವುಡ್ ‘ಕಪ್ಪುಪಟ್ಟಿ’ಗೆ ಸೇರಿಸುವಲ್ಲಿ ನಟ ಜಾರ್ಜ್ ಕ್ಲೂನಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಾಗಿ ಆರೋಪಿಸಿದ ಬಳಿಕ ಈ ನಟಿ ಪ್ರಚಾರದಲ್ಲಿದ್ದರು.

ದಕ್ಷಿಣ ಪ್ಯಾಸಡೇನದಲ್ಲಿರುವ ನಟಿಯ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಗುಂಡು ಹಾರಾಟ ನಡೆದ ಬಳಿಕ ಶುಕ್ರವಾರ ಅವರು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ಮಾರ್ಕೀಝ್‌ಗೆ ವೈದ್ಯಕೀಯ ನೆರವು ಬೇಕೆಂಬುದಾಗಿ ಆಕೆಯ ಮನೆ ಮಾಲಕ ಪೊಲೀಸರಿಗೆ ಫೋನ್ ಮಾಡಿದರು.

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೆನ್ನಲಾದ ಅವರಿಗೆ ಅವರ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಅವರು ಆಟಿಕೆ ಬಂದೂಕನ್ನು ಪೊಲೀಸರತ್ತ ಹಿಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಅದು ನೈಜ ಬಂದೂಕಿನಂತೆ ಕಾಣುತ್ತಿದ್ದುದರಿಂದ ಪೊಲೀಸರು ಮಾರ್ಕೀಝ್ ಮೇಲೆ ಗುಂಡು ಹಾರಿಸಿದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News