2,000, 500ರ ನೋಟು ಮುದ್ರಣಕ್ಕೆ ಸರ್ಕಾರ ಮಾಡುವ ವೆಚ್ಚ ಎಷ್ಟು ಗೊತ್ತೇ?

Update: 2018-09-01 17:22 GMT

ಹೊಸದಿಲ್ಲಿ, ಸೆ.1: ನಾವು ನಮ್ಮ ಹಣ ಖರ್ಚು ಮಾಡುವಾಗ ಉತ್ಪನ್ನದ ಬಳಕೆಯ ಮೌಲ್ಯವನ್ನು ಅಳೆಯುತ್ತೇವೆ. ಆದರೆ ಪಕ್ಕಾ ಹಣದ ವಿಚಾರಕ್ಕೆ ಬಂದಾಗ ಅದರ ವೆಚ್ಚದ ಬಗ್ಗೆ ನಮಗೆ ಏನೂ ಗೊತ್ತಿರುವುದಿಲ್ಲ. ಉದಾಹರಣೆಗೆ 10 ರೂಪಾಯಿಯ ನೋಟು ಮುದ್ರಿಸಲು ಆಗುವ ವೆಚ್ಚ ಎಷ್ಟು ಎಂಬ ಕಲ್ಪನೆ ಇದೆಯೇ?, ಮುದ್ರಣಕ್ಕೆ ಆ ನೋಟಿನ ಮೌಲ್ಯಕ್ಕಿಂತ ಹೆಚ್ಚು ವೆಚ್ಚವಾಗುತ್ತದೆಯೇ ಅಥವಾ ಕಡಿಮೆಯೇ?.. ಈ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಯಾರಿಗೂ ಉತ್ತರ ಗೊತ್ತಿರುವುದಿಲ್ಲ.

ಈ ಬಗ್ಗೆ ‘ಇಂಡಿಯಾ ಟುಡೇ’ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಲಿಮಿಟೆಡ್‍ ಗೆ ಪ್ರಶ್ನೆ ಕೇಳಿದೆ. ವಿವಿಧ ನೋಟುಗಳನ್ನು ಮುದ್ರಿಸಲು ಸರ್ಕಾರಕ್ಕೆ ಆಗುತ್ತಿರುವ ವೆಚ್ಚ ಎಷ್ಟು ಎಂದು ವಿವರ ಕೇಳಿತ್ತು.

2,000 ರೂಪಾಯಿ ನೋಟುಗಳ ಮುದ್ರಣಕ್ಕೆ ಭಾರತ ಸರ್ಕಾರ 4.18 ರೂಪಾಯಿ ವೆಚ್ಚ ಮಾಡುತ್ತದೆ. 500 ರೂಪಾಯಿ ನೋಟು ಮುದ್ರಿಸಲು 2.57 ರೂಪಾಯಿ, 100 ರೂಪಾಯಿ ನೋಟು ಮುದ್ರಣಕ್ಕೆ 1.51 ರೂಪಾಯಿ ಮತ್ತು 10 ರೂಪಾಯಿ ನೋಟು ಮುದ್ರಣಕ್ಕೆ 1.01 ರೂಪಾಯಿ ವೆಚ್ಚವಾಗುತ್ತಿದೆ. ಆದರೆ 20 ರೂಪಾಯಿ ನೋಟು ಮುದ್ರಣದ ವೆಚ್ಚ 10 ರೂಪಾಯಿ ನೋಟಿನ ಮುದ್ರಣಕ್ಕೆ ಆಗುವ ವೆಚ್ಚಕ್ಕಿಂತ 1 ಪೈಸೆ ಕಡಿಮೆ.

2016ರ ನವೆಂಬರ್ 8ರಂದು ಅಮಾನ್ಯಗೊಂಡ 500 ರೂಪಾಯಿ ಮುದ್ರಿಸಲು 3.09 ರೂಪಾಯಿ ಖರ್ಚಾಗುತ್ತಿತ್ತು. ಅಂತೆಯೇ 1000 ರೂಪಾಯಿ ನೋಟು ಮುದ್ರಿಸಲು 3.54 ರೂಪಾಯಿ ವೆಚ್ಚವಾಗುತ್ತಿತ್ತು ಎಂದು ಈ ಪ್ರಶ್ನೆಗೆ ಉತ್ತರ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News