ನಾಲ್ಕನೇ ಟೆಸ್ಟ್: ಇಂಗ್ಲೆಂಡ್ 260/8

Update: 2018-09-01 18:08 GMT

ಸೌತಾಂಪ್ಟನ್, ಸೆ.1: ಆತಿಥೇಯ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದ್ದು, 233 ರನ್ ಮುನ್ನಡೆಯಲ್ಲಿದೆ.

ವಿಕೆಟ್ ನಷ್ಟವಿಲ್ಲದೆ 6 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್‌ಗೆ ಅಲಿಸ್ಟರ್ ಕುಕ್(12)ಹಾಗೂ ಮೊಯಿನ್ ಅಲಿ(9) ಉತ್ತಮ ಆರಂಭ ನೀಡಲು ವಿಫಲರಾದರು.

ಇಂಗ್ಲೆಂಡ್ 33 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಆಗ 3ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದ ನಾಯಕ ಜೋ ರೂಟ್(48) ಹಾಗೂ ಜೆನ್ನಿಂಗ್ಸ್(36) ತಂಡವನ್ನು ಆಧರಿಸಿದರು. ಜೆನ್ನಿಂಗ್ಸ್ ಔಟಾದ ಬಳಿಕ ಸ್ಟೋಕ್ಸ್ ಅವರೊಂದಿಗೆ 5ನೇ ವಿಕೆಟ್‌ಗೆ 30 ರನ್ ಜೊತೆಯಾಟ ನಡೆಸಿದ ರೂಟ್ ತಂಡವನ್ನು ಆಧರಿಸಲು ಯತ್ನಿಸಿದರು. ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ರೂಟ್ ಅವರು ಮುಹಮ್ಮದ್ ಶಮಿಗೆ ರನೌಟಾದರು.

 ಬೆನ್ ಸ್ಟೋಕ್ಸ್(30) ಹಾಗೂ ಜೋಸ್ ಬಟ್ಲರ್(69,122 ಎಸೆತ) 6ನೇ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿದರು. ಸ್ಟೋಕ್ಸ್ ಔಟಾದ ಬಳಿಕ ಸ್ಯಾಮ್ ಕರನ್‌ರೊಂದಿಗೆ 7ನೇ ವಿಕೆಟ್‌ಗೆ 55 ರನ್ ಸೇರಿಸಿದ ಬಟ್ಲರ್ ತಂಡದ ಮೊತ್ತವನ್ನು 233ಕ್ಕೆ ತಲುಪಿಸಿದರು. ಅಗ್ರ ಸ್ಕೋರರ್ ಬಟ್ಲರ್‌ಗೆ ಇಶಾಂತ್ ಶರ್ಮ ಪೆವಿಲಿಯನ್ ಹಾದಿ ತೋರಿಸಿದರು. ಸ್ಯಾಮ್ ಕರನ್ ಔಟಾಗದೆ 37 ರನ್ ಗಳಿಸಿದ್ದಾರೆ.

 ಭಾರತದ ಪರ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ(53ಕ್ಕೆ 3)ಮೂರು ವಿಕೆಟ್ ಪಡೆದರೆ, ಇಶಾಂತ್ ಶರ್ಮಾ(36ಕ್ಕೆ2)ಎರಡು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್:246/10

ಭಾರತ ಮೊದಲ ಇನಿಂಗ್ಸ್: 273/10

ಇಂಗ್ಲೆಂಡ್ 2ನೇ ಇನಿಂಗ್ಸ್:260/8

(ಬಟ್ಲರ್ 69, ರೂಟ್ 48, ಜೆನ್ನಿಂಗ್ಸ್ 36, ಕರನ್ ಅಜೇಯ 37, ಶಮಿ 3-53, ಇಶಾಂತ್ 2-36)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News