ಎನ್‌ಡಿಎ ಅಧಿಕಾರದಲ್ಲಿನ ಪಾವತಿಯಾಗದ ಸಾಲದ ವಿವರ ನೀಡಿ: ಚಿದಂಬರಂ ಒತ್ತಾಯ

Update: 2018-09-02 14:53 GMT

ಹೊಸದಿಲ್ಲಿ, ಸೆ. 2: ಯುಪಿಎ ಆಡಳಿತ ಅವಧಿಯಲ್ಲಿ ಸಾಲ ನೀಡಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಎನ್‌ಡಿಎ ಸರಕಾರದ ಆಡಳಿತದ ಸಂದರ್ಭ ನೀಡಲಾದ, ಈಗ ನಿಷ್ಕ್ರಿಯ ಆಸ್ತಿಯಾಗಿ ಪರಿವರ್ತಿತವಾಗಿರುವ ಸಾಲದ ವಿವರ ಬಹಿರಂಗ ಗೊಳಿಸುವಂತೆ ರವಿವಾರ ಎನ್‌ಡಿಎ ಸರಕಾರವನ್ನು ಕೋರಿದರು.

ಪಾವತಿಯಾಗದ ಸಾಲವಾಗಿರುವ ಈ ಹಿಂದಿನ ಸರಕಾರ ನೀಡಿದ ಸಾಲವನ್ನು ಯಾಕೆ ಹಿಂದೆ ಪಡೆಯಲಿಲ್ಲ ಎಂದು ಕೂಡ ಚಿದಂಬರಂ ಸರಣಿ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. 2014 ಮೇಯಲ್ಲಿ ನೀಡಲಾದ ಎಷ್ಟು ಸಂಖ್ಯೆಯ ಹಾಗೂ ಎಷ್ಟು ಪ್ರಮಾಣದ ಸಾಲ ನಿಷ್ಕ್ರಿಯ ಆಸ್ತಿಯಾಗಿ ಪರಿವರ್ತಿತವಾಗಿದೆ ಎಂದು ಅವರ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯನ್ನು ಸಂಸತ್ತಿನಲ್ಲಿ ಕೇಳಲಾಗಿತ್ತು. ಆದರೆ, ಇದುವರೆಗೆ ಉತ್ತರ ದೊರಕಿಲ್ಲ ಎಂದು ಅವರು ಹೇಳಿದ್ದಾರೆ. 2014 ಮೇಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಿಷ್ಕ್ರಿಯ ಆಸ್ತಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಾರಣ ಎಂದು ಹೇಳಿದ್ದರು. 2014ರಲ್ಲಿ ನೀಡಿದ ಸುಮಾರು ಒಟ್ಟು 1.75 ಕೋ. ರೂ. ಸಾಲದ 12 ಬಾಕಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News