ಬಿಐಟಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮಿಲನ

Update: 2018-09-03 11:43 GMT

ಮಂಗಳೂರು, ಸೆ.3: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯಲ್ಲಿ ಶನಿವಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಆಯೋಜಿಸಲಾಯಿತು.

ಸಂಸ್ಕೃತಿ, ಭಾಷೆ, ಧರ್ಮ, ರಾಜಕೀಯ, ಆಲೋಚನೆಗಳು ಹಾಗೂ ವಿಚಾರಧಾರೆಗಳಲ್ಲಿ ಸಾಕಷ್ಟು ವೈವಿಧ್ಯದ ನಡುವೆಯೂ ಏಕತೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, 20 ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಿಐಟಿ ಡೀನ್ (ಅಕಾಡಮಿಕ್ಸ್) ಡಾ.ಮಹಾಬಲೇಶ್ವರಪ್ಪ ಮಾತನಾಡಿ, ಭಾರತೀಯರ ಸಹಿಷ್ಣುತಾ ಮನೋಭಾವದ ಬಗ್ಗೆ ವಿವರ ನೀಡಿದರು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಕರೆ ನೀಡಿದ ಅವರು, ಯಾವುದೇ ನಿರ್ಧಾರದ ಸಂದರ್ಭ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಸಿರಿಕೊಳ್ಳುವುದು ಅತೀ ಅಗತ್ಯ ಎಂದವರು ಹೇಳಿದರು.

ವಿದೇಶಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇಸಿಇ ವಿಭಾಗದ ಮುಖ್ಯಸ್ಥರಾದ ಡಾ.ಅಬ್ದುಲ್ಲಾ ಗುಬ್ಬಿ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಪುರುಷೋತ್ತಮಂ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ವಿವೇಕ್ ಹುದ್ದರ್ ಮೊದಲಾದವರು ಉಪಸ್ಥಿತರಿದ್ದರು.

ಕಂಪ್ಯೂಟರ್ ಸಾಯನ್ಸ್ ವಿಭಾಗ ಮುಖ್ಯಸ್ಥ ಡಾ.ಮುಸ್ತಫಾ ಬಸ್ತಿಕೋಡಿ ಸ್ವಾಗತಿಸಿದರು. ಸಿಎಸ್‌ಇ ವಿಭಾಗದ ಪ್ರೊ. ಅಬ್ದ ಹಸನ್ ಅಲಿ ವಂದಿಸಿದರು. ಪ್ರೊ. ಅಂಕಿತಾ ಬೇಕಲ್ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News