200 ಅಡಿ ಆಳದ ಕಮರಿಗೆ ಬಿದ್ದ ವ್ಯಾನ್: 13 ಮಂದಿ ಮೃತ್ಯು

Update: 2018-09-03 15:33 GMT
ಫೋಟೊ ಕೃಪೆ: ANI

ಡೆಹ್ರಾಡೂನ್, ಸೆ.3: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ವ್ಯಾನ್ ಒಂದು ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

15 ಜನರಿದ್ದ ವ್ಯಾನ್ ಭಟ್ವಾಡಿ ಬಳಿ ಕಂದಕಕ್ಕೆ ಬಿದ್ದಿದೆ. ಸುಮಾರು 200 ಮೀ. ಆಳದ ಕಂದಕ ಇದಾಗಿದೆ. 13 ವರ್ಷದ ಬಾಲಕಿಯರಾದ ಮೀನಾಕ್ಷಿ ಮತ್ತು ರಾಧಾ ಎಂಬವರನ್ನು ರಕ್ಷಿಸಲಾಗಿದೆ. “ರಿಷಿಕೇಶ್-ಗಂಗೋತ್ರಿ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವ್ಯಾನ್ ಗಂಗೋತ್ರಿಯಿಂದ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News