ಜಿಎಸ್‌ಟಿ ಜಾಹೀರಾತಿಗೆ ಕೇಂದ್ರದಿಂದ 132.38 ಕೋ. ರೂ. ವೆಚ್ಚ

Update: 2018-09-03 17:54 GMT

ಹೊಸದಿಲ್ಲಿ, ಸೆ. 3: ಸರಕಾರ ಜಿಎಸ್‌ಟಿಯ ಜಾಹೀರಾತಿಗೆ 132.38 ಕೋ. ರೂ. ವೆಚ್ಚ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆ ಉತ್ತರಿಸಿದೆ.

ಸಚಿವಾಲಯದ ಅಡಿಯಲ್ಲಿ ಬರುವ ಬ್ಯೂರೊ ಆಫ್ ಔಟ್‌ರೀಚ್ ಹಾಗೂ ಕಮ್ಯೂನಿಕೇಶನ್, ಈ ಬ್ಯೂರೋದ ಮೂಲಕ ಮುದ್ರಣ ಮಾಧ್ಯಮದಲ್ಲಿ ಜಿಎಸ್‌ಟಿ ಜಾಹೀರಾತಿಗೆ 1,26,93,97,121 ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದೆ.

ಆದರೆ, ಇಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ಜಿಎಸ್‌ಟಿ ಜಾಹೀರಾತಿಗೆ ಯಾವುದೇ ವೆಚ್ಚ ಮಾಡಿಲ್ಲ ಎಂದು ಅದು ತಿಳಿಸಿದೆ.

ಜಿಎಸ್‌ಟಿಯ ಔಟ್ ಡೋರ್ ಜಾಹೀರಾತಿಗೆ (ಸಾರ್ವಜನಿಕ ಸ್ಥಳದಲ್ಲಿನ ಜಾಹೀರಾತು) 5,44,35,502 ರೂ. ವೆಚ್ಚ ಮಾಡಲಾಗಿದೆ ಎಂದು 2018 ಆಗಸ್ಟ್ 9ರಂದು ಈ ಆರ್‌ಟಿಐಗೆ ಬ್ಯೂರೊ ಪ್ರತಿಕ್ರಿಯಿಸಿದೆ.

2017 ಜುಲೈ 1ರಂದು ಸರಕಾರ ಜಿಎಸ್‌ಟಿ ಜಾರಿಗೊಳಿಸಿತು. ಅದಕ್ಕಿಂತ ಮುನ್ನ ಜನರಲ್ಲಿ ನೂತನ ತೆರಿಗೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಧ್ಯಮ ಹಾಗೂ ಸಾರ್ವಜನಿಕ ಜಾಹೀರಾತು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News