ಭಾರತ ಎ’ ತಂಡಕ್ಕೆ ಮುನ್ನಡೆ

Update: 2018-09-03 18:28 GMT

ಬೆಂಗಳೂರು, ಸೆ.3: ಅಂಕಿತ್ ಬಾವ್ನೆ ತಾಳ್ಮೆಯಿಂದ ದಾಖಲಿಸಿದ ಅಜೇಯ 91 ರನ್‌ಗಳ ನೆರವಿನಿಂದ ಭಾರತ‘ಎ’ ತಂಡ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ‘ಎ’ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮುನ್ನಡೆ ಸಾಧಿಸಿದೆ.

ಟೆಸ್ಟ್‌ನ 2ನೇ ದಿನವಾಗಿರುವ ಸೋಮವಾರ ಬಾವ್ನೆ ಬ್ಯಾಟಿಂಗ್ ನೆರವಿನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 274 ರನ್ ಗಳಿಸಿತು. ಇದರೊಂದಿಗೆ ಆಸ್ಟ್ರೇಲಿಯ ‘ಎ’ ವಿರುದ್ಧ 33 ರನ್‌ಗಳ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 243 ರನ್ ಗಳಿಸಿತ್ತು. ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ‘ಎ’ ತಂಡ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟದಲ್ಲಿ 42 ರನ್ ಗಳಿಸಿದೆ.

 ಮೊದಲ ದಿನದಾಟದಂತ್ಯಕ್ಕೆ ಭಾರತ‘ಎ’ ತಂಡ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಮಾಯಾಂಕ್ ಅಗರ್‌ವಾಲ್ ಅವರು ನಿನ್ನೆಯ ಸ್ಕೋರ್‌ಗೆ 16 ರನ್ ಸೇರಿಸಿದರು. ಅವರು 47 ರನ್ ಗಳಿಸಿ ನಿರ್ಗಮಿಸಿದರು. ತಂಡದ ಸ್ಕೋರ್ 92ಕ್ಕೆ ತಲುಪುವಾಗ ರವಿಕುಮಾರ್ ಸಮರ್ಥ್(25) ಔಟಾದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ (3), ಅಭಿಮನ್ಯು ಈಶ್ವರನ್(36) ಮತ್ತು ಭರತ್(5) ಔಟಾದರು. ಬಳಿಕ ಬಾವ್ನೆ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News