ಹರ್ಯಾಣ ಅಥ್ಲೀಟ್‌ಗಳ ಉತ್ತಮ ಸಾಧನೆ

Update: 2018-09-03 18:29 GMT

ಚಂಡಿಗಡ, ಸೆ.3: ಭಾರತ ಈ ಬಾರಿಯ ಏಶ್ಯನ್ ಗೇಮ್ಸ್ ನಲ್ಲಿ ಒಟ್ಟು 69 ಪದಕಗಳನ್ನು ಜಯಿಸಿ ಶ್ರೇಷ್ಠ ಸಾಧನೆ ಮಾಡಿದ್ದು 2010ರ ಗೇಮ್ಸ್‌ನಲ್ಲಿನ ಪದಕದ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ. ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಂತೆ ಏಶ್ಯನ್‌ಗೇಮ್ಸ್‌ನಲ್ಲೂ ಹರ್ಯಾಣದ ಅಥ್ಲೀಟ್‌ಗಳು ಭಾರತದ ಪದಕ ಗಳಿಕೆಯಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ.

ಇಂಡೋನೇಶ್ಯಾದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ ಒಟ್ಟು 69 ಪದಕಗಳ ಪೈಕಿ ಹರ್ಯಾಣದ ಅಥ್ಲೀಟ್‌ಗಳು 18 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಬಾರಿಯ ಗೇಮ್ಸ್‌ನಲ್ಲಿ ಅಥ್ಲೀಟ್‌ಗಳು 19 ಪದಕಗಳನ್ನು, ಶೂಟರ್‌ಗಳು 9 ಪದಕಗಳನ್ನು ಗೆದ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಥ್ಲೀಟ್‌ಗಳ ಪ್ರದರ್ಶನ ಚೆನ್ನಾಗಿರಲಿಲ್ಲ. ಶೂಟರ್‌ಗಳ ಪ್ರದರ್ಶನ ಉತ್ತಮವಾಗಿತ್ತು.

 ಕಾಮನ್‌ವೆಲ್ತ್‌ನಲ್ಲಿ ಒಟ್ಟು 30 ಪದಕಗಳನ್ನು ಜಯಿಸಿದ್ದ ಬಾಕ್ಸರ್‌ಗಳು, ಕುಸ್ತಿಪಟುಗಳು ಹಾಗೂ ವೇಟ್‌ಲಿಫ್ಟರ್‌ಗಳು ಏಶ್ಯಾ ಗೇಮ್ಸ್‌ನಲ್ಲಿ ಕೇವಲ 5 ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News