ಹೆಚ್ಚುತ್ತಿರುವ ಕಚ್ಚಾತೈಲ ಬೆಲೆ, ರೂಪಾಯಿಯ ಸಂಕಷ್ಟದಿಂದ 5ನೇ ದಿನವೂ ಕುಸಿದ ಶೇರುಪೇಟೆ

Update: 2018-09-04 15:09 GMT

ಮುಂಬೈ,ಸೆ.4: ವಿದೇಶಿ ಬಂಡವಾಳದ ನಿರಂತರ ಹೊರಹರಿವು, ಹೆಚ್ಚುತ್ತಿರುವ ಜಾಗತಿಕ ಕಚ್ಚಾತೈಲ ಬೆಲೆಗಳು ಮತ್ತು ಡಾಲರ್‌ನೆದುರು ದಿನೇದಿನೇ ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿಯಿಂದಾಗಿ ಮುಂಬೈ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಸತತ ಐದನೇ ದಿನವಾದ ಮಂಗಳವಾರವೂ ಕುಸಿತವನ್ನು ದಾಖಲಿಸಿದೆ.

ದಿನದಂತ್ಯಕ್ಕೆ ಸುಮಾರು 155 ಅಂಶಗಳ ನಷ್ಟದೊಂದಿಗೆ 38,157.92ರಲ್ಲಿ ಮುಕ್ತಾಯ ಕಂಡಿದ್ದು, ಇದು ಕಳೆದೆರಡು ವಾರಗಳಲ್ಲಿ ಕನಿಷ್ಠ ಮಟ್ಟವಾಗಿದೆ.

ಭಾರತೀಯ ರೂಪಾಯಿ ಮಂಗಳವಾರ ಅಮೆರಿಕನ್ ಡಾಲರ್‌ನೆದುರು 71.58ಕ್ಕೆ ಕುಸಿದು ಹೊಸ ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ.

ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ದಿನದಂತ್ಯದಲ್ಲಿ 62.05 ಅಂಶಗಳನ್ನು ಕಳೆದುಕೊಂಡು 11,520.30ರಲ್ಲಿ ಮುಕ್ತಾಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News