ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಯಶವಂತ್ ಸಿನ್ಹಾರಿಂದ ಸರಕಾರಕ್ಕೆ ತರಾಟೆ

Update: 2018-09-04 15:39 GMT

ಹೊಸದಿಲ್ಲಿ, ಸೆ. 4: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದಕ್ಕೆ ಗುರುವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಈ ವಿಷಯದ ಕುರಿತು ಪ್ರತಿಭಟನೆ ನಡೆಸದ ಪ್ರತಿಪಕ್ಷಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಈ ಹಿಂದಿಗಿಂತಲೂ ಅತ್ಯಧಿಕ ಏರಿಕೆಯಾಗಿದೆ. ಪ್ರತಿಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿಲ್ಲ ಯಾಕೆ?’’ ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 10ನೇ ದಿನವಾದ ಸೋಮವಾರ ಕೂಡ ಏರಿಕೆಯಾದ ಒಂದು ದಿನದ ಬಳಿಕ ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News