ಜೋಧಪುರ: ಐಎಎಫ್ ವಿಮಾನ ಪತನ

Update: 2018-09-04 15:41 GMT

ಜೈಪುರ, ಸೆ. 3: ರಾಜಸ್ಥಾನ ಜೈಪುರದ ಬನಾದ್ ಪ್ರದೇಶದಲ್ಲಿ ಭಾರತೀಯ ವಾಯು ಪಡೆಯ ವಿಮಾನ ಮಂಗಳವಾರ ಪತನಗೊಂಡಿದೆ. ಆದರೆ, ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಜೋಧಪುರ ವಾಯು ನೆಲೆಯಿಂದ ಮಿಗ್ 27 ಯುದ್ಧ ವಿಮಾನ ಹಾರಾಟ ಆರಂಭಿಸಿತ್ತು. ‘‘ಮಂಗಳವಾರ ಬೆಳಗ್ಗೆ ಮಿಗ್ 27 ವಿಮಾನ ದಿನನಿತ್ಯದ ಹಾರಾಟದ ಸಂದರ್ಭ ಪತನಗೊಂಡಿತ್ತು.

ಅಪಘಾತದ ಕಾರಣದ ಬಗ್ಗೆ ತನಿಖಾ ನ್ಯಾಯಾಲಯ ವಿಚಾರಣೆ ನಡೆಸಲಿದೆ’’ ಎಂದು ರಕ್ಷಣಾ ವಕ್ತಾರ ಕರ್ನಲ್ ಸಂಬಿತ್ ಘೋಷ್ ತಿಳಿಸಿದ್ದಾರೆ. ಪತನದಿಂದ ಜೀವ ಹಾನಿ ಆಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತಲುಪಿದ್ದಾರೆ ಹಾಗೂ ಸುತ್ತುವರಿದಿದ್ದಾರೆ ಎಂದು ಜೋಧಪುರದ ಉಪ ಪೊಲೀಸ್ ಆಯುಕ್ತ ಅಮನ್‌ದೀಪ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News