ಬಿಜೆಪಿ ವಿರೋಧಿ ಘೋಷಣೆ ಕೂಗಿ ಬಂಧನಕ್ಕೊಳಗಾದ ಸಂಶೋಧನಾ ವಿದ್ಯಾರ್ಥಿನಿ ಬಿಡುಗಡೆ

Update: 2018-09-04 15:42 GMT

ಜೈಪುರ, ಸೆ. 4: ವಿಮಾನದಲ್ಲಿ ತಮಿಳುನಾಡು ಬಿಜೆಪಿ ವರಿಷ್ಠೆ ತಮಿಳಿಸೈ ಸುಂದರರಾಜನ್ ಅವರ ಎದುರೇ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಆರೋಪದಲ್ಲಿ ಸೋಮವಾರ ಬಂಧಿತರಾಗಿದ್ದ ಸಂಶೋಧನಾ ವಿದ್ಯಾರ್ಥಿನಿ ಎಸ್. ಲೋಯಿಸ್ ಸೋಫಿಯಾ ಅವರನ್ನು ತೂತುಕುಡಿ ಪೊಲೀಸರು ಸೋಮವಾರ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

ಕೆನಡದ ಮಾಂಟ್‌ರಿಯಲ್ ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿನಿಯಾಗಿರುವ ಎಸ್. ಲೋಯಿಸ್ ಸೋಫಿಯಾ ಹಾಗೂ ಸೌಂದರರಾಜನ್ ಚೆನ್ನೈಯಿಂದ ತೂತುಕುಡಿಗೆ ತೆರಳುತ್ತಿರುವ ವಿಮಾನದಲ್ಲಿ ಏರಿದ್ದರು. ಸೋಫಿಯಾ ತೂತುಕುಡಿ ಕಂಡನ್‌ಕಾಲನಿಯಲ್ಲಿ ಜೀವಿಸುತ್ತಿರುವ ತನ್ನ ಹೆತ್ತವರೊಂದಿಗೆ ಪ್ರಯಾಣಿಸುತ್ತಿದ್ದರು. ಸೋಫಿಯಾ ಬ್ಯಾಗ್‌ನ ಸಮೀಪ ಇದ್ದ ಲಗೇಜ್ ಅನ್ನು ಸೌಂದರರಾಜನ್ ತೆಗೆದುಕೊಳ್ಳುತ್ತಿದ್ದಾಗೆ ಸೋಫಿಯಾ ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ವಿಮಾನ ತೂತುಕುಡಿ ತಲುಪಿದಾಗ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸೌಂದರರಾಜನ್ ಬಿಜೆಪಿ ವಿರೋಧಿ ಘೋಷಣೆ ಕೂಗಿದ ಬಗ್ಗೆ ಸೋಫಿಯಾ ಅವರನ್ನು ಪ್ರಶ್ನಿಸಿದ್ದರು ಹಾಗೂ ಕ್ಷಮೆ ಕೋರುವಂತೆ ತಿಳಿಸಿದ್ದರು. ಆದರೆ, ಸೋಫಿಯಾ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News