ತಲ್ಲೂರು ಗ್ರಾಪಂ ಸೊತ್ತು ಹಾನಿ: ಪ್ರಕರಣ ದಾಖಲು

Update: 2018-09-04 17:32 GMT

ಕುಂದಾಪುರ, ಸೆ.4: ತಲ್ಲೂರು ಗ್ರಾಪಂಗೆ ಸೇರಿದ ಉಪ್ಪಿನಕುದ್ರು ಗ್ರಾಮದಲ್ಲಿ ರುವ ಕಟ್ಟಡವೊಂದರ ಶೌಚಾಲಯದ ಹೊಂಡಕ್ಕೆ ಅಳವಡಿಸಿದ ಮುಚ್ಚಳವನ್ನು ಧ್ವಂಸಗೊಳಿಸಿದ ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ಮೂವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಪಂ 14ನೆ ಹಣಕಾಸು ಯೋಜನೆಯಡಿಯಲ್ಲಿ 2016-17ನೆ ಸಾಲಿನಲ್ಲಿ ಒಂದು ಕಟ್ಟಡವನ್ನು ನಿರ್ಮಾಣ ಮಾಡಿ ಆ ಕಟ್ಟಡಕ್ಕೆ ಶೌಚಾಲಯದ ಹೊಂಡ ನಿರ್ಮಿಸಿತ್ತು. ಹೊಂಡಕ್ಕೆ ಅಳವಡಿಸಿದ ಮುಚ್ಚಳವನ್ನು ಆ.22ರಂದು ಉಪ್ಪಿನ ಕುದ್ರು ಗ್ರಾಮದ ಸದಾನಂದ ಶೇರುಗಾರ್, ಅವರ ಪತ್ನಿ ಜಯಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಎಂಬವರು ದ್ವಂಸಗೊಳಿಸಿದ್ದರೆಂದು ದೂರಲಾಗಿದೆ.

ಈ ಬಗ್ಗೆ ತಲ್ಲೂರು ಗ್ರಾಪಂ ಸದಸ್ಯ ಶ್ರೀಕಾಂತ್ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ತೆಗೆದುಕೊಂಡ ನಿರ್ಣಯದಂತೆ ಸರಕಾರಿ ಸೊತ್ತಿಗೆ ನಷ್ಟವುಂಟು ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ನೀಡಿದ ದೂರಿನಂತೆ ಪ್ರಕಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News