‘ಖಾಸಗಿ ಶಾಲೆಯಲ್ಲೂ ಕನ್ನಡ ಕಡ್ಡಾಯ; ಸ್ವಾಗತಾರ್ಹ’

Update: 2018-09-04 17:34 GMT

ಮಂಗಳೂರು, ಸೆ.4: ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿರುವುದನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಶ್ಲಾಘಿಸಿದ್ದಾರೆ.

ಕನ್ನಡ ಕಲಿಕಾ ನಿಯಮಗಳ ಜಾರಿಯ ಕುರಿತಾಗಿ ಸಮಗ್ರ ವರದಿ ನೀಡುವಂತೆ ಒತ್ತಡ ಹೇರಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಪ್ರಯತ್ನ ಶ್ಲಾಘನಿಯವಾಗಿದೆ. ಇದಕ್ಕಾಗಿ ಅವರು ಅಭಿನಂದನಾರ್ಹರು ಎಂದು ಕಲ್ಕೂರ ತಿಳಿಸಿದರು.

ಸರಕಾರವು ಬದ್ಧತೆಯೊಂದಿಗೆ ಈ ಅದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಸಫಲತೆಯನ್ನು ಕಾಣುವಂತಾಗಲಿ ಎಂದು ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News