ಸ್ಯಾಫ್ ಕಪ್: ಲಂಕಾವನ್ನು ಎದುರಿಸಲಿರುವ ಭಾರತ

Update: 2018-09-04 17:57 GMT

ಢಾಕಾ, ಸೆ.4: ಸೌತ್ ಏಶ್ಯನ್ ಫುಟ್ಬಾಲ್ ಫೆಡರೇಶನ್(ಸ್ಯಾಫ್) ಕಪ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಬುಧವಾರ ಶ್ರೀಲಂಕಾವನ್ನು ಹಾಲಿ ಚಾಂಪಿಯನ್ ಭಾರತ ಎದುರಿಸಲಿದೆ.

 ಬಾಂಗ್ಲಾದ ಬಂಗಬಂಧು ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ನೈಜ ಸವಾಲು ಎದುರಾಗಲಿದೆ.

ಸ್ಯಾಫ್‌ನ ಕಳೆದ 12 ಆವೃತ್ತಿಯ ಟೂರ್ನಮೆಂಟ್‌ಗಳಲ್ಲಿ ಭಾರತ 7 ಬಾರಿ ಚಾಂಪಿಯನ್ ಆಗಿದೆ. 3 ಬಾರಿ ದ್ವಿತೀಯ ಹಾಗೂ 1 ಬಾರಿ ತೃತೀಯ ಸ್ಥಾನ ಪಡೆದಿದೆ.

 1995ರಲ್ಲಿ ಶ್ರೀಲಂಕಾದಲ್ಲಿ ನಡೆದ 2ನೇ ಆವೃತ್ತಿಯ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತವನ್ನು 1-0 ಅಂತರದಲ್ಲಿ ಮಣಿಸಿದ್ದ ಶ್ರೀಲಂಕಾ ತಂಡ ಚಾಂಪಿಯನ್ ಆಗಿತ್ತು. ಆ ಬಳಿಕ ಮತ್ತೊಮ್ಮೆ ಸ್ಯಾಫ್ ಚಾಂಪಿಯನ್ ಎನಿಸಿಕೊಳ್ಳಲು ಲಂಕೆಗೆ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News