ಅಂತಿಮ ಟೆಸ್ಟ್ ಗೆ ಪೃಥ್ವಿ ಶಾ

Update: 2018-09-04 17:59 GMT

ಸೌತಾಂಪ್ಟನ್ , ಸೆ.4: ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಶುಕ್ರವಾರ (ಸೆ.7) ಆರಂಭಗೊಳ್ಳಲಿದ್ದು, ಭಾರತದ ಅಂಡರ್ -19 ತಂಡದ ನಾಯಕ ಪೃಥ್ವಿ ಶಾ ಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಸತತ ನಾಲ್ಕು ಟೆಸ್ಟ್‌ಗಳಲ್ಲಿ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ ಪೃಥ್ವಿಗೆ ಚೊಚ್ಚಲ ಟೆಸ್ಟ್ ಆಡುವ ಅವಕಾಶ ಒದಗಿ ಬಂದಿದೆ.

 18ರ ಹರೆಯದ ಮಹಾರಾಷ್ಟ್ರದ ಆರಂಭಿಕ ದಾಂಡಿಗ ಶಾ ನಾಲ್ಕನೇ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದರು. ಇದೀಗ ಶಾ ನೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಶಾ 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 14 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕ ಮತ್ತು 5 ಅರ್ಧಶತಕಗಳನ್ನು ಒಳಗೊಂಡ 1,418 ರನ್ ದಾಖಲಿಸಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಂತಿಮ ಟೆಸ್ಟ್‌ಗೆ ಅಲಭ್ಯ. ಈ ಕಾರಣದಿಂದಾಗಿ ಆಲ್‌ರೌಂಡರ್ ರವೀಂದ್ರ ಜಡೇಜಗೆ ತಂಡದ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯಲು ಹಾದಿ ಸುಗಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News