5ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ದಾಂಡಿಗ ಪೋಪ್‌ಗೆ ಅವಕಾಶ

Update: 2018-09-04 18:21 GMT

ಲಂಡನ್, ಸೆ.4: ದಿ ಓವಲ್‌ನಲ್ಲಿ ನಡೆಯುವ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಅಲಿಸ್ಟೈರ್ ಕುಕ್ ಅಂತಿಮ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಈ ಮಹತ್ವದ ಪಂದ್ಯಕ್ಕೆ ಕ್ರಿಸ್ ವೋಕ್ಸ್ ಹಾಗೂ ಒಲ್ಲಿ ಪೋಪ್ ಇಂಗ್ಲೆಂಡ್ ತಂಡವನ್ನು ಸೇರ್ಪಡೆಯಾದರು.

ಶುಕ್ರವಾರ ಲಂಡನ್‌ನಲ್ಲಿ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯಕ್ಕಾಗಿ ಆಲ್‌ರೌಂಡರ್ ವೋಕ್ಸ್ ಹಾಗೂ ಬ್ಯಾಟ್ಸ್ ಮನ್ ಪೋಪ್ ತಯಾರಿ ಆರಂಭಿಸಿದ್ದಾರೆ.

ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯವನ್ನು 60 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಜಾನಿ ಬೈರ್‌ಸ್ಟೋವ್ ಬೆರಳು ನೋವಿನಿಂದ ಬಳಲುತ್ತಿರುವ ಕಾರಣ 5ನೇ ಟೆಸ್ಟ್ ನಲ್ಲಿ ಯಾರು ವಿಕೆಟ್‌ಕೀಪಿಂಗ್ ನಡೆಸುತ್ತಾರೆಂಬ ಬಗ್ಗೆ ಸ್ಪಷ್ಟತೆಯಿಲ್ಲ. 4ನೇ ಟೆಸ್ಟ್ ನಲ್ಲಿ ಜೋಸ್ ಬಟ್ಲರ್ ಕೀಪಿಂಗ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News