ಅಥ್ಲೀಟ್ ತೇಜಿಂದರ್ ಪಾಲ್ ತಂದೆ ಕರಣ್ ಸಿಂಗ್ ನಿಧನ

Update: 2018-09-04 18:24 GMT

ಹೊಸದಿಲ್ಲಿ, ಸೆ.4: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಅಥ್ಲೀಟ್ ತೇಜಿಂದರ್ ಪಾಲ್ ಸಿಂಗ್ ತೂರ್ ಅವರ ತಂದೆ ಕರಣ್ ಸಿಂಗ್ ಸೋಮವಾರ ಸಂಜೆ ನಿಧನರಾಗಿದ್ದಾರೆ.

ಜಕಾರ್ತದಿಂದ ದಿಲ್ಲಿಗೆ ತಲುಪಿ ಪಂಜಾಬ್‌ನ ಮೊಗಾ ಗ್ರಾಮಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ತೇಜಿಂದರ್‌ಪಾಲ್‌ಗೆ ತಂದೆಯ ನಿಧನದ ಸುದ್ದಿ ಲಭಿಸಿತ್ತು ಎಂದು ಮೂಲಗಳು ತಿಳಿಸಿವೆ.

ತೇಜಿಂದರ್ ತಂದೆ ಕಳೆದ 2 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ತೇಜಿಂದರ್ ದಿಲ್ಲಿಯಿಂದ ಮೊಗಾ ಗ್ರಾಮಕ್ಕೆ ರಸ್ತೆ ಮೂಲಕ ತೆರಳಲು ನಿರ್ಧರಿಸಿದ್ದರು. ಕೆಲವೇ ಕಿ.ಮೀ. ದೂರಕ್ಕೆ ತೆರಳುವಾಗ ತಂದೆಯ ನಿಧನದ ಸುದ್ದಿ ಲಭಿಸಿದೆ. ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ತೇಜಿಂದರ್ ತಂದೆಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದೆ.

ತೇಜಿಂದರ್ ಏಶ್ಯನ್ ಗೇಮ್ಸ್‌ನಲ್ಲಿ 20.75 ಮೀ.ದೂರಕ್ಕೆ ಶಾಟ್‌ಪುಟ್ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಲ್ಲದೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಸಿಂಗ್ ಈ ಪದಕವನ್ನು ತನ್ನ ಕುಟುಂಬಕ್ಕೆ ಸಮರ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News