ಹೆಜಮಾಡಿಯಲ್ಲಿ ಬೆಳ್ಳಿಮೀನು ಸುಗ್ಗಿ

Update: 2018-09-05 12:12 GMT

ಪಡುಬಿದ್ರೆ, ಸೆ. 5: ಹೆಜಮಾಡಿ ಕೋಡಿಯಲ್ಲಿ ಬುಧವಾರ ಮೀನುಗಾರಿಕೆಯ ವೇಳೆ ಸಿಲ್ವರ್ ಫಿಶ್ (ಬೆಳ್ಮೀನು) ಕಂಡುಬಂದಿದೆ.

ಹೆಜಮಾಡಿ ಕೋಡಿ ಐದು ರಂಪಣಿಗಳು ಮೀನುಗಾರಿಕೆ ನಡೆಸುತಿದ್ದು, ಎಲ್ಲೆಡೆ ಬೆಳ್ಮೀನು ಕಂಡುಬಂದಿದ್ದು, ಆಸುಪಾಸಿನ ಊರಿನವರು ಪುಕ್ಕಟೆ ಮೀನು ಪಡೆದುಕೊಂಡು ಹೋಗುತಿದ್ದಾರೆ. ಇಂದು ಬೆಳಗ್ಗೆಯಿಂದ ಮೀನುಗಾರಿಕೆಗೆ ಬಲೆ ಬೀಸಲು ಆರಂಭಿಸುತಿದ್ದಂತೆಯೇ ರಾಶಿರಾಸಿ ಮೀನುಗಳು ದಡಸೇರಿವೆ.

ಸುದ್ದಿ ತಿಳಿದ ಪಡುಬಿದ್ರೆ, ಹೆಜಮಾಡಿ, ಎರ್ಮಳು, ಫಲಿಮಾರು, ಮುಲ್ಕಿ ಪರಿಸರದ ಮೀನುಪ್ರಿಯರು ಪುಕ್ಕಟೆ ಮೀನು ಪಡೆಯುತಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News