ಸೆ. 30ರಂದು ಫೋರಂ ಮಾಲ್‌ನಿಂದ ಪರ್ಪಲ್ ರನ್

Update: 2018-09-05 10:07 GMT

ಮಂಗಳೂರು, ಸೆ. 5: ಮರೆವು ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಫೋರಂ ಫಿಝಾ ಮಾಲ್ ವತಿಯಿಂದ ಸೆ.30ರಂದು ಮುಂಜಾನೆ 5 ಗಂಟೆಗೆ ವಿವಿಧ ವಿಭಾಗಗಳ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಫೋರಂ ಮಾಲ್‌ನ ಸೆಂಟರ್ ಮ್ಯಾನೇಜರ್ ಫಯಾಝ್ ಎಂ.ಎಚ್., ಈ ಪರ್ಪಲ್ ರನ್ 3 (ಕುಟುಂಬದವರಿಗೆ) ಕಿ.ಮೀ, 5 ಕಿ.ಮೀ., 10 ಕಿ.ಮೀ., ಹಾಗೂ 21 ಕಿಮೀ. ಓಟವನ್ನು ಒಳಗೊಂಡಿದೆ. ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಓಟ ನಡೆಯಲಿದೆ. ಪಾಂಜೇಶ್ವರದಲ್ಲಿರುವ ಫೋರಂ ಮಾಲ್ ಮುಂಭಾಗದಿಂದ ಮ್ಯಾರಥಾನ್ ಆರಂಭಗೊಳ್ಳಲಿದ್ದು, ವಿಜೇತರಿಗೆ ನಗದಿನೊಂದಿಗೆ ಸೂಕ್ತ ಬಹುಮಾನ ನಿಗದಿಪಡಿಸಲಾಗಿದೆ ಎಂದರು.

ಮಂಗಳೂರು, ಬೆಂಗಳೂರು, ಮೈಸೂರು, ಉದಯಪುರ್, ಹೈದರಾಬಾದ್, ಚೈನ್ನೈ ಸೇರಿ 6 ನಗರಗಳಲ್ಲಿನ ಫೋರಂ ಮಾಲ್‌ಗಳು ಏಕಕಾಲದಲ್ಲಿ ಈ ಮಾರಥಾನ್ ನಡೆಸಲಿವೆ. 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ 40ಲಕ್ಷಕ್ಕೂ ಮಿಕ್ಕಿದ ಜನತೆ ಮರೆವು ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 55 ವರ್ಷದ ನಂತರದ ಅವಧಿಯಲ್ಲಿ ಬಹಳವಾಗಿ ಕಾಡುವ ಮರೆವು ರೋಗದ ಬಗ್ಗೆ ಜಾಗೃತಿ ಅತ್ಯವಶ್ಯಕ ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆಯ ದೃಷ್ಟಿಯಲ್ಲಿಟ್ಟುಕೊಂಡು ಮ್ಯಾರಥಾನ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದವರು ತಿಳಿಸಿದರು.

ಫೋರಂ ಮಾಲ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪೂರ್ವಿಕಾ ಮೊಬೈಲ್ಸ್‌, ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್‌ ಆ್ಯಂಡ್ ಡೈಮಂಡ್ಸ್‌, ಸಂಗೀತಾ ಮೊಬೈಲ್ಸ್ ಹಾಗೂ ಎಂಎಸ್ ಸ್ಪೋಟ್ಸ್‌ವೇರ್ ಸಂಸ್ಥೆಗಳು ಸಹಭಾಗಿತ್ವ ನೀಡಿವೆ.

ಮ್ಯಾರಥಾನ್‌ನಲ್ಲಿ ಭಾಗವಹಿಸುವವರು https://Forummalls.in/thepurple  ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಸುನಿಲ್, ಸುಮಂತ್, ಕನ್ಸಲ್ಟೆಂಟ್ ವೇಣು ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News