ಪಂಜಾಬ್: 6,000 ಕಾಲೇಜು ಶಿಕ್ಷಕರಿಂದ ಸಾಮೂಹಿಕ ರಜೆ

Update: 2018-09-05 13:34 GMT

ಚಂಡಿಗಡ,ಸೆ.5: ಶಿಕ್ಷಕರ ದಿನವಾದ ಬುಧವಾರ ಪಂಜಾಬಿನಲ್ಲಿಯ 6,000ಕ್ಕೂ ಅಧಿಕ ಕಾಲೇಜು ಶಿಕ್ಷಕರು ವೇತನ ಏರಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಮೂಹಿಕ ರಜೆಯಲ್ಲಿ ತೆರಳಿದ್ದಾರೆ.

 ತಮ್ಮ ಬೇಡಿಕೆಗಳ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರಕಾರದ ಉದಾಸೀನವನ್ನು ವಿರೋಧಿಸಿ ರಾಜ್ಯದ ವಿವಿಧೆಡೆಗಳಿಂದ ಇಲ್ಲಿಗೆ ಆಗಮಿಸಿದ್ದ ಶಿಕ್ಷಕರು ಪ್ರತಿಭಟನೆಯನ್ನು ನಡೆಸಿದರು.

ಹರ್ಯಾಣ ಸೇರಿದಂತೆ ಹಲವಾರು ರಾಜ್ಯಗಳು ಕಾಲೇಜುಗಳು ಮತ್ತು ವಿವಿಗಳ ಶಿಕ್ಷಕರಿಗೆ ಯುಜಿಸಿ ವೇತನಶ್ರೇಣಿಯನ್ನು ನೀಡಿವೆ,ಆದರೆ ಪಂಜಾಬ್ ಸರಕಾರವು ವಿಫಲಗೊಂಡಿದೆ ಎಂದು ಪಂಜಾಬ್ ವಿವಿ ಮತ್ತು ಕಾಲೇಜು ಶಿಕ್ಷಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಗವಂತ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News