ಬ್ರಹ್ಮಪುತ್ರಾ ನದಿಯಲ್ಲಿ ಬೋಟ್ ಮುಳುಗಡೆ: ಇಪ್ಪತ್ತು ಮಂದಿ ಸಾವನ್ನಪ್ಪಿರುವ ಶಂಕೆ

Update: 2018-09-05 14:13 GMT

ಗುವಾಹಟಿ, ಸೆ.5: ಅಸ್ಸಾಂನ ಗುವಾಹಟಿಯಲ್ಲಿ 40 ಜನರನ್ನು ಹೊತ್ತು ಸಾಗುತ್ತಿದ್ದ ಬೋಟೊಂದು ಬ್ರಹ್ಮಪುತ್ರಾ ನದಿಯಲ್ಲಿ ಮುಳುಗಿದ ಪರಿಣಾಮ ಕನಿಷ್ಟ ಇಪ್ಪತ್ತು ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ 40 ಜನರನ್ನು ಹೊತ್ತು ಸಾಗಿದ್ದ ನೋಟ್ ಗುವಾಹಟಿಯ ಫ್ಯಾನ್ಸಿ ಬಝಾರ್ ಸಮೀಪದ ಅಸ್ವಕ್ಲಾಂತ ದೇವಸ್ಥಾನದ ಹತ್ತಿರ ತಾಂತ್ರಿಕ ದೋಷದಿಂದಾಗಿ ಬ್ರಹ್ಮಪುತ್ರಾ ನದಿಯಲ್ಲಿ ನೀರು ಪೂರೈಕೆ ಯೋಜನೆಗಾಗಿ ನಿರ್ಮಿಸಲಾಗುತ್ತಿದ್ದ ಸ್ತಂಭಕ್ಕೆ ಢಿಕ್ಕಿ ಹೊಡೆದಿದೆ. ನಂತರ ನದಿಯಲ್ಲಿ ಮುಳುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಟ್‌ನಲ್ಲಿದ್ದವರನ್ನು ರಕ್ಷಿಸಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ಧಾವಿಸಿದ್ದು ನದಿಯಿಂದ ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬೋಟ್‌ನಲ್ಲಿದ್ದ ಹನ್ನೆರಡು ಜನರನ್ನು ರಕ್ಷಣಾ ತಂಡ ಸುರಕ್ಷಿತವಾಗಿ ದಡಕ್ಕೆ ಕರೆತಂದಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಲ್ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News