ಮಾಲೇಗಾಂವ್ ಸ್ಪೋಟ ಪ್ರಕರಣ: ಲೆ. ಕರ್ನಲ್ ಪುರೋಹಿತ್, ಇತರರ ಆರೋಪ ರಚನೆ ಮುಂದೂಡಿಕೆ

Update: 2018-09-05 14:34 GMT

ಮುಂಬೈ, ಸೆ. 5: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾದ ಲೆ. ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಹಾಗೂ ಇತರರ ವಿರುದ್ಧ ಆರೋಪ ರೂಪಿಸುವುದನ್ನು ವಿಚಾರಣಾ ನ್ಯಾಯಾಲಯ ಬುಧವಾರ ಮುಂದೂಡಿದೆ.

ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿಎ) ಅಡಿಯಲ್ಲಿ ತಮ್ಮ ವಿಚಾರಣೆಗೆ ಅನುಮೋದನೆಯ ಸಿಂಧುತ್ವದ ಬಗ್ಗೆ ಪುರೋಹಿತ್ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಧೀಶ ವಿನೋದ್ ಪಾದಾಲ್ಕರ್ ಆರೋಪ ರೂಪಿಸುವುದನ್ನು ಮುಂದೂಡಿದ್ದಾರೆ. ವಿಚಾರಣೆ ನಡೆಸುವ ಮುನ್ನ ತಮ್ಮ ಮೇಲೆ ಯುಎಪಿಎ ಅನ್ವಯಿಸಲು ಸಾಧ್ಯವೇ ಎಂಬುದನ್ನು ಮೊದಲು ನಿರ್ಧರಿಸಬೇಕು ಎಂದು ಆರೋಪಿಗಳಲ್ಲಿ ಓರ್ವರಾದ ಮಾಜಿ ಮೇಜರ್ ರಮೇಶ್ ಉಪಾಧ್ಯಾಯ ವಾದಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿನೋದ್ ಪಾದಾಲ್ಕರ್ ವಿಚಾರಣೆಯನ್ನು ಮುಂದೂಡಿದರು ಹಾಗೂ ಎಲ್ಲಾ ಆರೋಪಿಗಳ ವಾದವನ್ನು ನ್ಯಾಯಾಲಯ ಮುಂದಿನ ಸೋಮವಾರ ಆಲಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News