ರೂಪಾಯಿ ಕುಸಿತ: ಜನಸಾಮಾನ್ಯನ ಮೇಲೆ ಬೀಳಲಿದೆ ಹೊರೆ

Update: 2018-09-05 15:03 GMT

ಹೊಸದಿಲ್ಲಿ, ಸೆ.5: ಬುಧವಾರದಂದು ರೂಪಾಯಿ ಡಾಲರ್ ಎದುರು ಮತ್ತಷ್ಟು ಕುಸಿತ ಕಂಡು 71.96ಕ್ಕೆ ತಲುಪಿದೆ, ಆಮೂಲಕ ರೂಪಾಯಿ ಡಾಲರ್ ಎದುರು ಹೊಸ ದಾಖಲನೆಯನ್ನು ಬರೆದಿದೆ. ಏರುತ್ತಲೇ ಇರುವ ತೈಲಬೆಲೆ, ಸೆಬಿಯ ನೂತನ ಕೆವೈಸಿ ಅಧಿಸೂಚನೆಯಿಂದ ಉಂಟಾಗಿರುವ ಬಂಡವಾಳ ಹೊರಹರಿವಿನ ಭಯ ಹಾಗೂ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ರೂಪಾಯಿ ಡಾಲರ್ ಎದುರು ವೌಲ್ಯವನ್ನು ಕಳೆದುಕೊಳ್ಳುತ್ತಿದೆ.

 ಏಶ್ಯಾದ ಕರೆನ್ಸಿಗಳಲ್ಲೇ ರೂಪಾಯಿ ಡಾಲರ್ ಎದರು ಅತ್ಯಂತ ಕಳಪೆ ನಿರ್ವಹಣೆ ತೋರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಆರ್ಥಿಕ ವರ್ಷದ ಆರಂಭದಲ್ಲಿ ಡಾಲರ್ ಎದುರು 63.67 ಇದ್ದ ರೂಪಾಯಿ ಈಗ 71.96ಕ್ಕೆ ತಲುಪಿದ್ದು ಶೇ.13 ಕುಸಿತ ಕಂಡಿದೆ. ರೂಪಾಯಿ ವೌಲ್ಯ ಕುಸಿತದಿಂದ ಸಾಗರೋತ್ತರ ಪ್ರವಾಸ, ಕಾರು ಹಾಗೂ ಇತರ ವಸ್ತುಗಳ ಆಮದು ಮತ್ತು ವಿದೇಶಗಳಲ್ಲಿ ಶಿಕ್ಷಣ ಪಡೆಯುವುದು ದುಬಾರಿಯಾಗಲಿದೆ. ಇಷ್ಟು ಮಾತ್ರವಲ್ಲದೆ, ದಿನಬಳಕೆಯ ವಸ್ತುಗಳಾದ ತರಕಾರಿ, ದವಸಧಾನ್ಯಗಳು ಹಾಗೂ ಇತರ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಜೊತೆಗೆ ಗೃಹಸಾಲದ ಮೇಲೆಯೂ ನೇರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News