ಸೆ. 8: ನಿಟ್ಟೆ ವಿವಿ ಘಟಿಕೋತ್ಸವ; ವಿನೋದ್ ಕೆ.ದಾಸರಿಗೆ ಗೌರವ ಡಾಕ್ಟರೇಟ್‌

Update: 2018-09-06 12:39 GMT

ಮಂಗಳೂರು, ಸೆ. 6: ನಿಟ್ಟೆ ವಿಶ್ವ ವಿದ್ಯಾನಿಲಯದಿಂದ ಖ್ಯಾತ ಹೃದ್ರೋಗ ತಜ್ಞ ಕಂದಾವರ ನಾರಾಯಣ ಶೆಟ್ಟಿ ಮತ್ತು ಅಶೋಕ್ ಲೈಲ್ಯಾಂಡ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ವಿನೋದ್ ಕೆ. ದಾಸರಿ ಅವರಿಗೆ ಗೌರವ ಡಾಕ್ಟರೇಟ್‌ನ್ನು ಸೆ.8ರಂದು ನಡೆಯುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಉಪ ಕುಲಪತಿ ಸತೀಶ್  ಕುಮಾರ್ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನಿಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ವಿಶ್ವ ವಿದ್ಯಾನಿಲಯದ ಎಂಟನೆ ವಾರ್ಷಿಕ ಘಟಿಕೋತ್ಸವ ಕುಲಾಧಿಪತಿ ನಿಟ್ಟೆ ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಪಾನಿನ ಮಿಯಾಝಕಿ ವಿಶ್ವ ವಿದ್ಯಾನಿಲಯದ ಅಧ್ಯಕ್ಷ ಪ್ರೊ. ಡಾ. ತ್ಸುಯೋಮ ಇಕೇನೋ ಅವರ 8ನೆ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಸಹ ಕುಲಪತಿ ಡಾ. ಶಾಂತರಾಮ ಶೆಟ್ಟಿ,(ಆಸ್ಪತ್ರೆ ಆಡಳಿತ ವಿಭಾಗ), ಸಹ ಕುಲಪತಿ ವಿಶಾಲ್ ಹೆಗ್ಡೆ (ಆಡಳಿತ ವಿಭಾಗ) ಸಹ ಉಪ ಕಲಪತಿ ಎಂ.ಎಸ್. ಮೂಡಿತ್ತಾಯ ಮೊದಲಾದವರು ಭಾಗವಹಿಸಲಿದ್ದಾರೆ.

ಘಟಿಕೋತ್ಸವದಲ್ಲಿ ಒಟ್ಟು 852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 20 ಮಂದಿಗೆ ಪಿಎಚ್‌ಡಿ ಪದವಿ ನೀಡಲಾಗುವುದು.196 ವೈದ್ಯಕೀಯ,138 ಡೆಂಟಲ್, 168 ಫಾರ್ಮಸಿ, 84 ನರ್ಸಿಂಗ್, 78 ಫಿಸಿಯೋಥೆರಪಿ, 73 ಅಲೈಡ್ ಹೆಲ್ತ್ ಸೈನ್ಸ್, 30 ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಶನ್, 65 ಬಯೋಮೆಡಿಕಲ್ ಸೈನ್ಸ್‌ಸ್ ಪದವಿಧರರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಸತೀಶ್ ಭಂಡಾರಿ ತಿಳಿಸಿದ್ದಾರೆ.

ನಿಟ್ಟೆ ವಿಶ್ವ ವಿದ್ಯಾನಿಲಯದಲ್ಲಿ 14 ಪದವಿ ಮತ್ತು 46 ಸ್ನಾತಕೋತ್ತರ ಕೋರ್ಸ್ ನಡೆಸಲಾಗುತ್ತಿದೆ. ವಿಶ್ವ ವಿದ್ಯಾನಿಲಯದಲ್ಲಿ ಗರಿಷ್ಠ ಅಂಕ ಪಡೆದವರಿಗೆ , ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡಲಾಗುತ್ತಿದೆ. ವಿಶ್ವ ವಿದ್ಯಾನಿಲಯದಿಂದ 10 ಹಾಗೂ ಇತರ ಪ್ರಾಯೋಜಕರಿಂದ 7 ಸೇರಿದಂತೆ ಒಟ್ಟು 17 ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ ಎಂದು ಸತೀಶ್ ಭಂಡಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ನಿಯಂತ್ರಕ ಡಾ.ಪ್ರಸಾದ್ ಬಿ.ಶೆಟ್ಟಿ, ಕುಲ ಸಚಿವೆ, ಡಾ. ಅಲ್ಕಾ ಕುಲಕರ್ಣಿ, ಸಹ ಉಪ ಕಲಪತಿ ಎಂ.ಎಸ್. ಮೂಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News