ಪಂಜಿಕಲ್ಲು ವಲಯ ಮಟ್ಟದ ವಿವಿಧ ಘಟಕಗಳ ಸಪ್ತಾಹ ಕಾರ್ಯಕ್ರಮ

Update: 2018-09-06 11:59 GMT

ಬಂಟ್ವಾಳ,ಸೆ. 6: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪುರಸಭೆ ಬಂಟ್ವಾಳ, ಜಿಲ್ಲಾ ಸ್ವಚ್ಛಭಾರತ್, ಬಂಟ್ವಾಳ ರೋಟರಿ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿವಿಧ ಘಟಕಗಳ ಸಪ್ತಾಹ ಕಾರ್ಯಕ್ರಮ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ, ಮಾತ್ರವಂದನಾ ಸಪ್ತಾಹ, ಸ್ವಚ್ಛ ಗೆಳತಿ ಋತುಸ್ರಾವದ ಜಾಗ್ರತಿ ಅಭಿಯಾನ, ಹೆಣ್ಣು ಮಕ್ಕಳ ಹುಟ್ಟು ಹಬ್ಬ ಆಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಮಾಹಿತಿ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ ಅವರು ಚಾಲನೆ ನೀಡಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾಣಿ ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಆಚಾರ್ಯ, ರೋಟರಿ ಸಂಸ್ಥೆಯ ಇಂಟರ್ ನ್ಯಾಶನಲ್ ಸರ್ವೀಸ್ ಡೈರೆಕ್ಟರ್ ಪ್ರತಿಭಾ ರೈ, ವಿದ್ಯಾ ರೈ ಉಪಸ್ಥಿತರಿದ್ದರು.

ಹಿರಿಯ ಮೇಲ್ವಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿದರು, ಮಯ್ಯರಬೈಲು ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಿ ವಂದಿಸಿದರು. ಭಂಡಾರಿಬೆಟ್ಟು ಕಾರ್ಯಕರ್ತೆ ಭವ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News