ಇಎಸ್‌ಐ ಸೌಲಭ್ಯ ನೀಡುವಂತೆ ಒತ್ತಾಯಿಸಿ ಕಾರ್ಮಿಕರಿಂದ ಧರಣಿ

Update: 2018-09-06 13:40 GMT

ಉಡುಪಿ, ಸೆ.6: ಕಾರ್ಮಿಕರ ವಿಮಾ ಯೋಜನೆ(ಇಎಸ್‌ಐ) ಸೌಲಭ್ಯ ನೀಡುವಂತೆ ಆಗ್ರಹಿಸಿ ಹಾಗೂ ಆಸ್ಪತ್ರೆಗಳಲ್ಲಿ ಇಎಸ್‌ಐ ಚಿಕಿತ್ಸೆ ಸ್ಥಗಿತಗೊಳಿಸಿರು ವುದನ್ನು ವಿರೋಧಿಸಿ ಮಾಸ್ ಇಂಡಿಯಾ ಹಾಗೂ ಮಾಹಿತಿ ಸೇವಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟೆಯಾರ್ ಮಾತನಾಡಿ, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಇಎಸ್‌ಐ ಚಿಕಿತ್ಸೆ ನೀಡುವಂತೆ ಇಎಸ್‌ಐ ಕಾರ್ಪೋರೇಶನ್ 10 ದಿನದೊಳಗೆ ಕರಾರು ಪತ್ರವನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಶೀಘ್ರವೇ ಸೂಕ್ತ ಕಾನೂನು ರೂಪಿಸಿ ವಂಚಕ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಡುಪಿ, ಕುಂದಾಪುರ, ಮಣಿಪಾಲ ಹಾಗೂ ಕಾರ್ಕಳದಲ್ಲಿರುವ ಇಎಸ್‌ಐ ಔಷಧಾಲಯಗಳಲ್ಲಿ ಸರಿಯಾದ ಸೌಲಭ್ಯಗಳು ದೊರೆಯುತ್ತಿಲ್ಲ. ಇಲ್ಲಿ ಕೇವಲ 2 ವೈದ್ಯಾಧಿಕಾರಿಗಳು ಹಾಗೂ 4 ಸಿಬ್ಬಂದಿಗಳು ಮಾತ್ರ ಇದ್ದಾರೆ ಎಂದ ಅವರು, ಮೂರು ಸಾವಿರಕ್ಕಿಂತ ಅಧಿಕ ಸದಸ್ಯರಿರುವ ಗ್ರಾಮ ಹಾಗೂ ನಗರ ಸಭಾ ಪ್ರದೇಶಗಳಲ್ಲಿ ಅತಿ ಶೀಘ್ರದಲ್ಲಿ ಒಂದು ವಿಶೇಷ ಇಎಸ್‌ಐ ಔಷಧಾಲಯ ಗಳನ್ನು ಸ್ಥಾಪಿಸಬೇಕು ಎಂದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಸಲ್ಲಿಸಲಾಯಿತು. ಸಮಿತಿಯ ಮಣಿಪಾಲ ಯೂತ್ ಫ್ರಂಟ್‌ನ ಅವಿನಾಶ್, ಮಹಿಳಾ ಅಧ್ಯಕ್ಷೆ ಗೀತಾ ಪೂಜಾರಿ, ಮಣಿಪಾಲ ಮಾಸ್ ಇಂಡಿಯಾ ಅಧ್ಯಕ್ಷೆ ನರಸಿಂಹಮೂರ್ತಿ ರಾವ್, ವಿಶ್ವನಾಥ, ವೀಣಾ ದೀಪಕ್, ಚಂದ್ರಶೇಖರ್ ಕಾಪು, ಐರಿನ್ ಥಾವ್ರೋ, ಶ್ರೀಧರ ಭಟ್ ಮೊದ ಲಾದವರು ಉಪಸ್ಥಿತರಿದ್ದರು.

ಅ.2ರಿಂದ ಉಪವಾಸ ಸತ್ಯಾಗ್ರಹ: ಎಚ್ಚರಿಕೆ

ಕೇಂದ್ರ ಹಾಗೂ ರಾಜ್ಯ ಸರಕಾರ ಇಎಸ್‌ಐ ಸೌಲಭ್ಯ ಒದಗಿಸದಿದ್ದರೆ ಅ.2 ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿ.ಎ.ಕೋಟೆಯಾರ್ ಎಚ್ಚರಿಕೆ ನೀಡಿದ್ದಾರೆ.

ಮಣಿಪಾಲ ಕೆಎಂಸಿ ಆಸ್ಪತ್ರೆ ಈಗಾಗಲೇ ಇಎಸ್‌ಐ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಪ್ರಧಾನಿ ಸೇರಿದಂತೆ ಇಲಾಖಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಉಡುಪಿಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಹಾಗೂ ನಗದು ರಹಿತ ಸ್ಕೀಂಗಳನ್ನು ನಿರಾಕರಿಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News