ಎಂಡೋ ಪೀಡಿತೆ ನಿಧನ

Update: 2018-09-06 18:39 GMT

ಪುತ್ತೂರು: ಎಂಡೋ ಪೀಡಿತರಾಗಿದ್ದ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ನಿವಾಸಿ ಪುಷ್ಪಾವತಿ(34) ಬುಧವಾರ ಸ್ವಗೃಹದಲ್ಲಿ ನಿಧನರಾದರು. 

ಶೇ. 100ರಷ್ಟು ಎಂಡೋ ಪೀಡಿತರಾಗಿರುವ ಇವರು, ಹುಟ್ಟಿನಿಂದ ಮಲಗಿದ್ದಲ್ಲೇ ಇದ್ದರು. ತನ್ನ ಕೆಲಸ ಕಾರ್ಯಕ್ಕೂ ಇನ್ನೊಬ್ಬರನ್ನು ಅವಲಂಬಿಸಿದ್ದರು. ಕಳೆದ ನಾಲ್ಕು ತಿಂಗಳಿನಿಂದ ತೀರಾ ಅಸೌಖ್ಯಕ್ಕೆ ಒಳಗಾಗಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸ ಫಲಕಾರಿಯಾಗದೆ ನಿಧನರಾದರು. 
ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News