ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಸುಧಾಕರ ಸುವರ್ಣ ತಿಂಗಳಾಡಿ

Update: 2018-09-06 18:44 GMT
ಸುಧಾಕರ ಸುವರ್ಣ, ಗಣೇಶ್ ಕಲ್ಲರ್ಪೆ, ಕೃಷ್ಣಪ್ರಸಾದ್

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘ(ರಿ.) ಇದರ 2018-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಧಾಕರ ಸುವರ್ಣ ತಿಂಗಳಾಡಿ ಮತ್ತು ಕಾರ್ಯದರ್ಶಿಯಾಗಿ ಗಣೇಶ್ ಕಲ್ಲರ್ಪೆ ಅವಿರೋಧವಾಗಿ ಆಯ್ಕೆಯಾದರು. 

ಗುರುವಾರ ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 
ಉಪಾಧ್ಯಕ್ಷರಾಗಿ ಉಮಾಪ್ರಸಾದ್ ನಡುಬೈಲು ಮತ್ತು ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಜೊತೆ ಕಾರ್ಯದರ್ಶಿಯಾಗಿ ಅನೀಶ್ ಮರೀಲ್, ಖಜಾಂಜಿಯಾಗಿ ಕೃಷ್ಣಪ್ರಸಾದ್ ಬಲ್ನಾಡು ಆಯ್ಕೆಯಾದರು. 

ಸಂಘದ ಹಿರಿಯ ಸದಸ್ಯರಾದ ಬಿ.ಟಿ. ರಂಜನ್ ಚುನಾವಣಾಧಿಕಾರಿಯಾಗಿ ಹಾಗೂ ಮೇಘ ಪಾಲೆತ್ತಾಡಿ ಮತ್ತು ಸಂಶುದ್ದೀನ್ ಸಂಪ್ಯ ಉಪ ಚುನಾವಣಾಧಿಕಾರಿಗಳಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. 

ಚುನಾವಣೆ ಪ್ರಕ್ರಿಯೆ ಬಳಿಕ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ನಡೆಯಿತು. ನಿರ್ಗಮನ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮತ್ತು ನಿರ್ಗಮನ ಕಾರ್ಯದರ್ಶಿ ಕಿರಣ್ ಪ್ರಸಾದ್ ಕುಂಡಡ್ಕ ಅವರು ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಕಾರ್ಯದರ್ಶಿ ಗಣೇಶ್ ಕಲ್ಲರ್ಪೆ ಸ್ವಾಗತಿಸಿದರು. ಉಪಾಧ್ಯಕ್ಷ ಉಮಾಪ್ರಸಾದ್ ರೈ ವಂದಿಸಿದರು.

ಸಂಘದ ವಾರ್ಷಿಕ ಮಹಾಸಭೆ:
ಚುನಾವಣೆ ಪ್ರಕ್ರಿಯೆಗೆ ಮುನ್ನ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು 2017-18ನೇ ಸಾಲಿನ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ ವಹಿಸಿದ್ದರು. ಪತ್ರಕರ್ತರ ಸಂಘದ ಕಾನೂನು ಸಲಹೆಗಾರರಾದ, ಹಿರಿಯ ನ್ಯಾಯವಾದಿ ಬಿ. ಪುರಂದರ ಭಟ್ ಉಪಸ್ಥಿತರಿದ್ದರು.

ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ಸಭೆ ಸಂತಾಪ ಸೂಚಿಸಿತು. ಈ ಸಾಲಿನ ಕಾರ್ಯದರ್ಶಿ ಕಿರಣ್ ಪ್ರಸಾದ್ ಕುಂಡಡ್ಕ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಹರೀಶ್ ಕೃಷ್ಣ ಸ್ಟುಡಿಯೋ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಭೆ ಅದನ್ನು ಅನುಮೋದಿಸಿತು. ಸಂಘದ ಸದಸ್ಯರಾದ ದೀಪಕ್ ಉಬಾರ್, ಸಂಶುದ್ದೀನ್ ಸಂಪ್ಯ, ಶಶಿಧರ ರೈ ಕುತ್ಯಾಳ, ಶೇಖ್ ಜೈನುದ್ದೀನ್, ನಜೀರ್ ಕೊೈಲ, ಉದಯ ಕುಮಾರ್ ಯು.ಎಲ್. ಅನಿಸಿಕೆ ವ್ಯಕ್ತಪಡಿಸಿದರು. ಸದಸ್ಯರಾದ ಸಂತೋಷ್ ಕುಮಾರ್ ಶಾಂತಿನಗರ, ಸಿದ್ದಿಕ್ ಕುಂಬ್ರ, ಕರುಣಾಕರ ರೈ ಸಿ.ಎಚ್., ಲೋಕೇಶ್ ಬನ್ನೂರು, ನಾರಾಯಣ ನಾಯ್ಕ್, ಅಜಿತ್ ಕುಮಾರ್, ಪ್ರವೀಣ್ ಕುಮಾರ್  ಕೃಷ್ಣ ಪ್ರಸಾದ್, ನಝೀರ್ ಕೊೈಲ, ಎನ್.ಕೆ.ನಾಗರಾಜ್ ಚರ್ಚೆಯಲ್ಲಿ ಪಾಲ್ಗೊಂಡರು.

ಮಹೇಶ್ ಪುಚ್ಚಪ್ಪಾಡಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿಗೆ ಸಹಕರಿಸಿದ ಎಲ್ಲರಿಗೂ ಅಭಿವಂದನೆ ಸಲ್ಲಿಸಿದರು. 2017-18ನೇ ಸಾಲಿನ ಉಪಾಧ್ಯಕ್ಷರಾದ ಸುಧಾಕರ ಸುವರ್ಣ ತಿಂಗಳಾಡಿ, ಅನೀಶ್ ಕುಮಾರ್, ಜತೆ ಕಾರ್ಯದರ್ಶಿ ಶ್ರವಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News