ಲಾಡ್ಜುಗಳ ಕಾನೂನು ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಸಚಿವ ಖಾದರ್‌ಗೆ ಒಡನಾಡಿ ಪತ್ರ

Update: 2018-09-07 11:26 GMT

ಮಂಗಳೂರು, ಸೆ.7: ನಗರದ ಕೆಲವು ಲಾಡ್ಜುಗಳಲ್ಲಿ ಕಟ್ಟಡ ಕಾನೂನು ಮತ್ತು ಮಾನವ ಹಕ್ಕುಗಳ ನಿಯಮ ಉಲ್ಲಂಘಿಸಿ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದು, ಅವುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮೈಸೂರಿನ ಒಡನಾಡಿ ಸಂಸ್ಥೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದೆ.

ಪತ್ರದ ಮೂಲಕ ಈ ಒತ್ತಾಯ ಮಾಡಿರುವ ಸಂಸ್ಥೆ, ಇತ್ತೀಚೆಗೆ ಪೊಲೀಸರ ಸಹಕಾರದಲ್ಲಿ ಇಂತಹ ಲಾಡ್ಜುಗಳಿಗೆ ದಾಳಿ ನಡೆಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಆಗಿರುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲದೆ ಮಾನವ ಕಳ್ಳಸಾಗಾಟದ ವ್ಯವಸ್ಥೆಯೂ ನಡೆಯುತ್ತಿದೆ. ಲಾಡ್ಜುಗಳ ವ್ಯವಸ್ಥೆಗಳು ಅನಾರೋಗ್ಯಕರವಾಗಿ ಕಂಡು ಬಂದಿದೆ. ಕಟ್ಟಡಗಳ ಅನುಮೋದಿತ ಮೂಲ ವಿನ್ಯಾಸವನ್ನು ಉಲ್ಲಂಘಿಸಿ ಕಳ್ಳ ಕಿಂಡಿಗಳನ್ನು, ಕಬ್ಬಿಣದ ಗೇಟುಗಳನ್ನು ಹಾಕಿರುವುದರಿಂದ ಇಂತಹ ಕಟ್ಟಡಗಳ ಪರವಾನಗಿಯನ್ನು ರದ್ದು ಮಾಡಬೇಕೆಂದು ನಗರಾಭಿವೃದ್ಧಿ ಸಚಿವರನ್ನು ಒಡನಾಡಿ ಸಂಸ್ಥೆಯ ಪರಶು ಮತ್ತು ಸ್ಟಾನ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News