ಸಾಹಿತಿ, ನಿವೃತ್ತ ಶಿಕ್ಷಕ ಶಿವರಾಮ ಶಿಶಿಲರಿಗೆ ಸನ್ಮಾನ

Update: 2018-09-07 11:39 GMT

ಬೆಳ್ತಂಗಡಿ: ಮಕ್ಕಳಲ್ಲಿ ನೈತಿಕ ಮೌಲ್ಯದೊಂದಿಗೆ ಸಮಾಜದಲ್ಲಿ ಸುಸಂಸ್ಕೃತ ನಾಗರಿಕನನ್ನಾಗಿ ಬೆಳೆಸುವ ಶಿಕ್ಷಣವನ್ನು ಪ್ರತಿಯೊಬ್ಬ ಶಿಕ್ಷಕನು ನೀಡಬೇಕು ಎಂದು ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಶಿವರಾಮ ಶಿಶಿಲ ಹೇಳಿದರು. 

ಅವರು ಗುರುವಾರ ಉಜಿರೆ ರುಡ್‍ಸೆಟ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. 

ಈಗಿನ ಸರಕಾರಿ ಶಾಲೆಗಳ ಸ್ಥಿತಿಗತಿ ನೋಡಿದರೆ ಕಣ್ಣೀರು ಬರುತ್ತದೆ. ಸರಕಾರಿ ಶಾಲೆಗಳಿಗೆ ಸರಕಾರ ರೀತಿಯ ಯೋಜನೆಗಳನ್ನು, ಸವಲತ್ತುಗಳನ್ನು ಕೊಡುತ್ತಿದೆ. ಆದರೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಿಕ್ಷಕರ ಕೊರತೆ ಇದೆ. ಏಕರೂಪದ ಶಿಕ್ಷಣ ನೀತಿಯನ್ನು ಅಳವಡಿಸಬೇಕು ಎಂದ ಅವರು, ಶಿಕ್ಷಕರೂ ಕೂಡಾ ತರಗತಿಯಲ್ಲಿ ಪಾಠ ಮಾಡುವಂತೆ ತಮ್ಮ ಮಕ್ಕಳಂತೆ ಭಾವಿಸಬೇಕು. ನ್ಯಾಯ ಒದಗಿಸಿದರೆ ಮಕ್ಕಳು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಇದರಿಂದ ಸಮಾಜ ಶಿಕ್ಷಕರನ್ನು ಗುರುತಿಸುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ ಪ್ರಸಾದ್ ಸ್ವಾಗತಿಸಿ, ಸಭೆಯನ್ನು ನಡೆಸಿಕೊಟ್ಟರು. ರೋಟರಿ ಕ್ಲಬ್ ಸದಸ್ಯರಾದ ಡಾ. ಜಯ ಕುಮಾರ್ ಶೆಟ್ಟಿ ಅತಿಥಿಯನ್ನು ಪರಿಚಯಿಸಿ, ಪ್ರಸಾದ್ ಕೆ.ಪಿ. ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ರಾಜೇಂದ್ರ ಕಾಮತ್ ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News