ಸೆ.10: ಬಿ.ಎ ಮೊಹಿದೀನ್ ರ ಆತ್ಮ ಕಥನ ‘ನನ್ನೊಳಗಿನ ನಾನು’ ಕೃತಿಯ 2ನೇ ಮುದ್ರಣ ಬಿಡುಗಡೆ

Update: 2018-09-07 12:26 GMT

ಮಂಗಳೂರು, ಸೆ.7: ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಆಶ್ರಯದಲ್ಲಿ ಮುಹಮ್ಮದ್ ಕುಳಾಯಿ ಮತ್ತು ಬಿ.ಎ. ಮುಹಮ್ಮದ್ ಅಲಿ ನಿರೂಪಿಸಿರುವ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರ ಆತ್ಮಕಥನ ‘ನನ್ನೊಳಗಿನ ನಾನು’ ಕೃತಿಯ ಎರಡನೇ ಮುದ್ರಣವು ಬಿಡುಗಡೆಗೆ ಸಜ್ಜಾಗಿದೆ.

ಬೆಂಗಳೂರಿನ ಅಶೋಕ್ ನಗರ ಬ್ರಿಗೇಡ್ ರಸ್ತೆಯ ಹೊಟೇಲ್ ಐರಿಷ್‌ನಲ್ಲಿ ಸೆ.10ರಂದು ಸಂಜೆ 4:30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಾಹಿತಿ, ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.

ಮುಖ್ಯಅತಿಥಿಯಾಗಿ ಪತ್ರಕರ್ತ ಬಿ.ಎಂ.ಹನೀಫ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News