ದಾಖಲೆಯ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

Update: 2018-09-07 16:14 GMT

ಹೊಸದಿಲ್ಲಿ, ಸೆ.7: ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸುಮಾರು 50 ಪೈಸೆಗಳ ಏರಿಕೆಯಾಗುವ ಮೂಲಕ ಪ್ರತಿದಿನ ಬೆಲೆ ಪರಿಷ್ಕರಣೆ ಮಾಡುವ ಕ್ರಮ ಅನುಷ್ಟಾನಕ್ಕೆ ಬಂದ ಹದಿನಾಲ್ಕು ತಿಂಗಳಲ್ಲೇ ಅತೀಹೆಚ್ಚಿನ ಏರಿಕೆಯನ್ನು ಕಂಡಿದೆ.

ಪೆಟ್ರೋಲ್ ಬೆಲೆಯಲ್ಲಿ 48 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರದಲ್ಲಿ 47 ಪೈಸೆ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 79.99 ರೂ. ತಲುಪಿದ್ದರೆ ಮುಂಬೈಯಲ್ಲಿ 87.39 ಪ್ರತಿ ಲೀ. ಮಾರಾಟ ಮಾಡಲಾಗುತ್ತಿದೆ. ಇದೇ ವೇಳೆ ದಿಲ್ಲಿಯಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 72.07 ರೂ. ಆಗಿದ್ದರೆ ಮುಂಬೈಯಲ್ಲಿ 76.51 ರೂ. ಪ್ರತಿ ಲೀಟರ್‌ಗೆ ತಲುಪಿದೆ. ತೈಲಬೆಲೆಯಲ್ಲಿ ನಿರಂತರ ಏರಿಕೆನ್ನು ವಿರೋಧಿಸಿ ವಿರೋಧ ಪಕ್ಷಗಳು ಮುಂದಿನ ವಾರ ದೇಶವ್ಯಾಪಿ ಮುಷ್ಕರ ನಡೆಸಲು ಸಜ್ಜಾಗುತ್ತಿವೆ.

ಡಾಲರ್ ವಿರುದ್ಧ ರೂಪಾಯಿ ವೌಲ್ಯದಲ್ಲಿ ಉಂಟಾಗಿರುವ ಕುಸಿತದಿಂದಾಗಿ ಆಮದು ಮತ್ತಷ್ಟು ದುಬಾರಿಯಾಗಿರುವ ಪರಿಣಾಮ ತೈಲಬೆಲೆ ನಿಯಂತ್ರಣಕ್ಕೆ ಸಿಗದ ಹಾಗೆ ಏರುಗತಿಯಲ್ಲಿ ಸಾಗಿದೆ. ರೂಪಾಯಿ ವೌಲ್ಯ ಕುಸಿತದಿಂದ ಭಾರತದ ಮೇಲೆ 68,500 ಕೋಟಿ ರೂ. ಹೆಚ್ಚುವರಿ ವಿದೇಶಿ ಸಾಲದ ಹೊರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News