ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್: ಐವರ ವಿರುದ್ಧ ಪ್ರಕರಣ ದಾಖಲು

Update: 2018-09-07 16:47 GMT

ತಿರುವನಂತಪುರ, ಸೆ. 7: ಹಿರಿಯ ವಿದ್ಯಾರ್ಥಿಗಳಿಂದ ಥಳಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಕೇರಳದ ಇಡುಕ್ಕಿಯ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನ ಮೊದಲ ವರ್ಷದ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಶುಕ್ರವಾರ ಇನ್‌ಸ್ಟಿಟ್ಟೂಟ್‌ನ ಐವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿಡಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಟೆಕ್ನಾಲಜಿಗೆ ಜೂನ್ 22ರಂದು ಸೇರಿದ್ದ ಅತುಲ್ ಮೋಹನ್ ಅವರು ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ ಸಂದರ್ಭ ಥಳಿಸಿದ್ದರು. ಇದರಿಂದ ಅವರ ಕೈ ಹಾಗೂ ಕಾಲು ಜಖಂಗೊಂಡಿತ್ತು. ಹಿರಿಯ ವಿದ್ಯಾರ್ಥಿಗಳು ಆಗಾಗ ಥಳಿಸುತ್ತಿರುವಾಗ ಒಂದು ಕೈಯಲ್ಲಿ ರಾಡ್ ಹಾಗೂ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು 2 ಗಂಟೆ ನಿಂತಿದ್ದೆ ಎಂದು ಮೋಹನ್ ಹೇಳಿದ್ದಾರೆ.

ಮೊಬೈಲ್ ಕೆಳಗೆ ಬಿದ್ದಾಗ ಅವರು ಆಕ್ರೋಶಿತರಾಗಿ ಮತ್ತೆ ನನಗೆ ಥಳಿಸಿದ್ದರು ಎಂದು ಮೋಹನ್ ದೂರಿನಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ಆದರೆ, ಮೋಹನ್ ಪೊಲೀಸ್ ದೂರು ದಾಖಲಿಸಿದ ಬಳಿಕ ಆಂತರಿಕ ತನಿಖೆ ನಡೆಸಿತು ಹಾಗೂ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News