ಸರಣಿಯ 5 ಪಂದ್ಯಗಳಲ್ಲೂ ಟಾಸ್ ಜಯಿಸಿದ ರೂಟ್

Update: 2018-09-07 18:28 GMT

ಲಂಡನ್, ಸೆ.7: ಇಂಗ್ಲೆಂಡ್ ನಾಯಕ ಜೋ ರೂಟ್ ಭಾರತ ವಿರುದ್ಧ ಓವಲ್‌ನಲ್ಲಿ ಇಂದು ಆರಂಭವಾದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿದ್ದಾರೆ. ರೂಟ್ 20 ವರ್ಷಗಳ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ 5 ಪಂದ್ಯಗಳಲ್ಲೂ ಟಾಸ್ ಜಯಿಸಿದ ಮೊದಲ ನಾಯಕ ಎನಿಸಿಕೊಂಡರು. ಆಸ್ಟ್ರೇಲಿಯದ ಮಾರ್ಕ್ ಟೇಲರ್ 1998-99ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ 5 ಬಾರಿ ಟಾಸ್ ಜಯಿಸಿದ್ದರು. ರೂಟ್ ಭಾರತ ವಿರುದ್ಧ ಸತತ 5 ಬಾರಿ ಟಾಸ್ ಜಯಿಸಿದ ಇಂಗ್ಲೆಂಡ್‌ನ ಮೊದಲ ಹಾಗೂ ವಿಶ್ವದ 3ನೇ ನಾಯಕನಾಗಿದ್ದಾರೆ. ವಿಂಡೀಸ್‌ನ ಜಾನ್ ಗೊಡ್ಡಾರ್ಡ್(1948-49) ಹಾಗೂ ಕ್ಲೈವ್ ಲಾಯ್ಡಾ(1982-83) 5 ಬಾರಿ ಟಾಸ್ ಜಯಿಸಿದ್ದ ನಾಯಕನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News