ಗಾಂಜಾ ಸೇವನೆ- ಮಾರಾಟ: ಏಳು ಮಂದಿಯ ಬಂಧನ

Update: 2018-09-07 18:31 GMT

ಉಡುಪಿ, ಸೆ.7: ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಸೆ.6ರಂದು ಮಧ್ಯಾಹ್ನ ವೇಳೆ ಮಣಿಪಾಲದ ಅಧಿತಿ ಅಪಾರ್ಟಮೆಂಟಿನ ಫ್ಲಾಟ್‌ನಲ್ಲಿ ಬಂಧಿಸಿದ್ದಾರೆ.

ಅರ್ಜುನ್ ರಾಜ್, ಮೊಹಮ್ಮದ್ ಸನತ್, ಶಾಹಿನ್ ಕೆ.ಪಿ., ಎಬಿನ್ ಸಜಿ ಜೋರ್ಜ್, ಸಿದ್ಧಾರ್ಥ ಎಚ್.ಎಲ್., ಮಿಥುನ್ ನಾಯಕ್, ಕುರಿಯನ್ ಪೀಟರ್ ಬಂಧಿತ ಆರೋಪಿಗಳು. ಇವರಿಗೆ ಗಾಂಜಾವನ್ನು ತಂದು ನೀಡಿರುವ ಅಶ್ವಿನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಹೊಂದಿದ್ದ ಒಂದು ಲಕ್ಷ ರೂ. ವೌಲ್ಯದ 2.804 ಕೆಜಿ ಗಾಂಜಾ, ಎರಡು ಮೊಬೈಲ್, 2 ಬ್ಯಾಗ್, ವೇಯಿಂಗ್ ಮೆಷಿನ್ ಮತ್ತು 6,000ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News