ಕಾಸರಗೋಡು: ಮೊಂತಿ ಫೆಸ್ಟ್‌ ಸಂಭ್ರಮ

Update: 2018-09-08 06:29 GMT

ಕಾಸರಗೋಡು, ಸೆ.8: ಜಿಲ್ಲೆಯ ಕೆಥೊಲಿಕ್‌ ಕ್ರೈಸ್ತರು ಮೊಂತಿ  ಫೆಸ್ಟ್‌ (ತೆನೆ ಹಬ್ಬ)ನ್ನು ಶನಿವಾರ ಸಂಭ್ರಮದಿಂದ ಆಚರಿಸಿದರು. ವಿಶೇಷ ಪ್ರಾರ್ಥನೆ ಹಾಗೂ ಬಲಿಪೂಜೆ ನೆರವೇರಿತು. 

ಇಲ್ಲಿನ  ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ರಾಣಿಪುರ ಋಷಿವನ ಧ್ಯಾನ ಕೇಂದ್ರದ ಧರ್ಮಗುರು ಫಾದರ್  ಜೋಸೆಫ್ ಡಿಸೋಜ ಬಲಿಪೂಜೆ ನೆರವೇರಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್  ವಿಕ್ಟರ್  ಡಿಸೋಜ  ನೇತೃತ್ವ ನೀಡಿದರು 

 ಕಳೆದ ಒಂಬತ್ತು ದಿನಗಳಿಂದ ಮೇರಿ ಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತೆ ಮೇರಿಗೆ ಪುಷ್ಪಾರ್ಚನೆ ನಡೆಸಿದರು.

ಇಂದು ಬೆಳಗ್ಗೆ  ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆ ನೆರವೇರಿತು.

ತೆನೆ ಹಬ್ಬ ಪ್ರಕೃತಿ ಮಾತೆಯನ್ನು ನಮಿಸುವ ಹಬ್ಬ. ಎಳೆಯ ಭತ್ತದ ತೆನೆಗಳನ್ನು ಆಶೀರ್ವದಿಸಿ ಪ್ರತಿ ಕುಟುಂಬಗಳಿಗೆ ಹಂಚಲಾಯಿತು. ಭಕ್ತರಿಗೆ ಕಬ್ಬು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News